ತುಸು ಬೀಸು
ತಂಗಾಳಿಯೆ ತುಸು ತಣ್ಣಗೆ ಬೀಸು ನಿ ಬಿಸಿಲಲಿ ..
ನಿನ್ನಬಿಟ್ಟು ಯಾರಿಲ್ಲ ನನ್ನವರು ಈ ಊರಲಿ ..
ಗೊತ್ತಿಲ್ಲ ಗುರಿ ಇಲ್ಲಾ
ಬೇಕೆನ್ನುವುದು ಸಿಗಲಿಲ್ಲ
ಸಿಕ್ಕಿದ್ದೆಲ್ಲವೂ ನನ್ನದಲ್ಲಾ…
ರಕ್ತಸಂಬಂಧಗಳೆಲ್ಲಾ ಗಣಿತದ ಲೆಕ್ಕಾಚಾರದ ಮೇಲೆ ನಿಂತಿದೆಯಲ್ಲಾ …
ಪಾಪ ಪುಣ್ಯವೆಲ್ಲಾ ನೀರಿನ ಮೇಲೆ ನಿಂತ ಗುಳ್ಳೆಯಂತಿದೆಯಲ್ಲಾ ….
ಬದುಕಿನ ಅರ್ಥವೂ ತಿಳಿಯದೆ ಮನವು ಮೌನತಾಳಿದೆ .
ಜೀವನದ ಊರಲ್ಲಿ ಸುತ್ತಾಡಿ ಸಾಕಾಗಿದೆ
ಇಷ್ಟು ಜನರಲ್ಲಿ ನನ್ನವರ ಹುಡುಕುತಲಿ ನಿಲ್ಲದೆ ಪಯಣ ಸಾಗಿದೆ .
ಯಾರು ನನ್ನವರು? ಎಲ್ಲಿಹುದು ನನ್ನ ಮನೆ ? ಏನ ಹುಡುಕುತಲಿ ಕಳೆದೆ ವರುಷಗಳ ? ಸಿಗದ ವಸ್ತುವಿಗೆ ಹುಡುಕಾಡುವ ಹುಚ್ಚುತನವೇಕಯ್ಯ
ತುಸು ದಣಿದಾಗ ನೀರು ಸಿಗದಾಗ ಈ ಹೃದಯಕೆ ನೀನೆ ತಾನೇ ಜೊತೆಗಾತಿ .ತಂಗಾಳಿಯೆ ಬಿಡಬೇಡ ಜೊತೆಯಲಿರು ತಂಪಾಗಿ ನನ್ನ ಜೊತೆಯಾಗಿ ನನ್ನ ಉಸಿರಾಗಿ .
(ಬರವಣಿಗೆ )
ಇವಾ ಲೇಖಾ
ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??
ivaalekha7717@gmail.com