ಬ್ರಹ್ಮನ ಮನಸಿನ ಮರ್ಮ
ನಿ ಬರೆದ ಹಣೆಬರವ
ತಿದ್ದಲಾಗದು ಬ್ರಹ್ಮ
ಹಾಲಲ್ಲಿ ಅದ್ದಿ
ನೀರಲ್ಲಿ ತೊಳೆದರು ಕಳೆಯದಾ ಕರ್ಮಾ!
ಜೇನುಹುಳು ಜೇನ ಕೊಟ್ಟರು
ತಾನು ಸವಿಯಲಾರದು ಸಿಹಿಯ!
ಗೋಮಾತೆ ಅಮೃತಕೊಟ್ಟರು
ತಿನ್ನುವಳು ಗರಿಯ!
ಮರವಾಗಿ ಹೂಹಣ್ಣು ಕೊಡದಿದ್ದರೆ ಕಾಡು ಮರವೆಂದು ಕೊಡುವರು ಕೊಡಲಿಯ ಪೆಟ್ಟ .
ಮೊಟ್ಟೆ ಇಡದ ಕೋಳಿಯ ಉಳಿಸುವರೇನು ಕೊನೆಯವರೆಗೆ ?
ಕಾಯುವವನ ಕೊಲ್ಲುವವನ ಮಧ್ಯ
ಕಾದಾಡಿದವರಲ್ಲಿ ಉಳಿದುಕೊಂಡವರು
ಅಳಿದಾಗ …. ನಿ ಹೋಗುವುದೇ ಆರಡಿ ಮೂರಡಿ ಅಲ್ಲವೇನಾ ?
ಬ್ರಮ್ಮ ಬರೆದ ಹಣೆಬರದಲ್ಲಿ ಮೊದಲ ಪುಟವು ಕೊನೆಯ ಪುಟವು ಎಲ್ಲಾ ಒಂದೇ ಅಲ್ಲವೇನಾ!?
ಒಳ್ಳೆಯದು ಕೆಟ್ಟದ್ದು ಎಲ್ಲವು ಸರಿಸಮಾನ.ಅರ್ಥವಿಲ್ಲದ ಧರ್ಮ ಅನುಭವಿಸುತ್ತಿರುವವರ ಕರ್ಮಾ!!
ಅರಿಯದಾಗಿದೆ ಬ್ರಹ್ಮನ ಮನಸಿನ ಮರ್ಮ….!!
(ಬರವಣಿಗೆ )
ಇವಾ ಲೇಖಾ
ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??
ivaalekha7717@gmail.com
ವಾಟ್ಸ್ ಆಪ್ no: 9741329365