ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದ ಮೋದಿ
ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಅವರು ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. 20 ನಿಮಿಷಗಳ ದೇಗುಲದ ಒಳಗೆ ಇದ್ದರು. ಕೆಲ ನಿಮಿಷಗಳ ಕಾಲ ಮೋದಿ ಧ್ಯಾನವನ್ನೂ ಮಾಡಿದರು.
ಗರ್ಭ ಗುಡಿ ಪ್ರವೇಶಿಸಿದ ಕೂಡಲೇ ಮೊದಿ ಅವರು ದೇವಾಲಯದ ವಸ್ತ್ರಸಂಹಿತೆಯನ್ನು ಪಾಲಿಸಿದರು. ಪಂಚೆ ಮತ್ತು ಶಲ್ಯ ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮೊದಲು ವೇದಘೋಷಗಳೊಂದಿಗೆ ಪ್ರಧಾನಿ ಅವರಿಗೆ ಧರ್ಮಸ್ಥಳದಲ್ಲಿ ಸ್ವಾಗತ ನೀಡಲಾಯಿತು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಅವರ ಕುಟುಬದ ಸದಸ್ಯರು ಸೇರಿದಂತೆ ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ್ ಅವರು ಸಹ ಪ್ರಧಾನಿ ಜತೆಯಲ್ಲಿದ್ದರು.
ಧರ್ಮಸ್ಥಳದಿಂದ ಮೋದಿ ಅವರು ರಸ್ತೆ ಮಾರ್ಗವಾಗಿ ಉಜಿರೆಗೆ ತೆರಳಿ ಪ್ರಜೆಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಇಂದು ಸಾಯಂಕಾಲ ಬೀದರ್ ಗೆ ತೆರಳಲಿರುವ ಮೋದಿ ಅಲ್ಲಿ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ.