UK Suddi
The news is by your side.

ಕನ್ನಡ ರಾಜ್ಯೋತ್ಸವ

ಕನ್ನಡ ನಾಡಿನ ಅಭಿಮಾನಾ

ರಾಜ್ಯೋತ್ಸವ ದಿವಸ ಅಷ್ಟೆನಾ |

ಅಂದೊಂದು ದಿನ ಮಾತ್ರ ಕನ್ನಡಕ್ಕೆ

ಘಂಟೆಗಟ್ಟಲೆ ಮಾರುದ್ದ ಭಾಷಣ ಸಾಕೇ? |

ಪ್ರಮುಖ, ಮಾನ್ಯ್, ಮಂತ್ರಿಗಳೆಲ್ಲ ಕೂಡಿಕೊಂಡು

ಮಾಜಿ ಕನ್ನಡ ಮಾಸ್ತರ ಹಿಡಿದು, ಬಾಷಣ ಕೊಂಡು|

ರಾತ್ರಿಇಡಿ ಅಮಲಿನಲಿ ಕಂಠಪಾಠ ಮಾಡಿ

ಬೆಳಿಗ್ಗೆ ಹೋಗಳುವರು ಕನ್ನಡ ನಾಡ-ನುಡಿ|

ತಾಯಿಯ ಅರಿಯುವದು, ಪ್ರೀತಿಸುವದು

ಯಾರಿಂದಲೊ ನಾವು ತಿಳಿಯುವದಾಗದು|

ಹೃದಯದಿಂದ-ಹೃದಯಕ್ಕೆ ಸ್ಪಂದಿಸುವ

ತಾಯ್ನುಡಿ ಉಕ್ಕುತ್ತಿದ್ದರು; ಹತ್ತಿಕ್ಕುವರು|

ಪರನುಡಿ ಎಲ್ಲರಿಗೂ ಕಷ್ಟವೆನಿಸಿದರು

ಕಷ್ಟ ಸಹಿಸುತ ಅದರಡಿಗೆ ಬಾಗುವರು|

ನಮ್ಮ ನಾಡ ನುಡಿ-ಪರಂಪರೆ

ನಮಗೆ ತಿಳಿಸಬೇಕೆ ಬೆರೆಯವರು?|

ನಮ್ಮಲ್ಲೆಂದು ಉಕ್ಕುವದೊ ಈ ಕಲೆ

ತಿಳಿಯುವದ ಕನ್ನಡ ನಾಡಿನ ಬೆಲೆ|

.

.

ಮಹಾಂತೇಶ ಹೊಂಗಲ

Ph: 9980677115

Comments