ನೇಕಾರರ 50000 ಸಾವಿರ ವರೆಗಿನ ಸಾಲ ಮನ್ನಾ
ಹಾವೇರಿ: ರಾಜ್ಯ ಸರ್ಕಾರ ನೇಕಾರರ ₹50 ಸಾವಿರ ವರೆಗಿನ ಸಾಲ ಮನ್ನಾ ಮಾಡಿದೆ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಸೋಮವಾರ ಘೋಷಣೆ ಮಾಡಿದರು.
ಒಟ್ಟು 9000 ನೇಕಾರರ ₹55.17 ಕೋಟಿ ಮನ್ನಾ ಮಾಡಲಾಗಿದೆ ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿಯೇ ಈ ಸಾಲವನ್ನು ಮನ್ನಾ ಮಾಡಲಾಗಿದ್ದು, ಸಹಕಾರ ಸಂಘಗಳಲ್ಲಿ ನೇಕಾರಿಕೆಗಾಗಿ ಪಡೆದ ನೇಕಾರರ ₹50 ಸಾವಿರ ವರೆಗಿನ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.