ಬೆಳಗಾವಿ:ಪರಿವರ್ತನಾ ಯಾತ್ರೆಯ ಪಧಾದಿಕಾರಿಗಳ ಪೂರ್ವ ಸಿದ್ಧತಾ ಸಭೆ.
ಬೆಳಗಾವಿ:ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಪಧಾದಿಕಾರಿಗಳ ಪೂರ್ವ ಸಿದ್ಧತಾ ಸಭೆ ಹಾಗು ಪತ್ರಿಕಾ ಗೋಷ್ಠಿ ನಡೆಯಿತು.
ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲೆಯ ಭಾಜಪ ಜಿಲ್ಲಾಧ್ಯಕ್ಷರಾದ ವಿ ಅಯ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪರಿವರ್ತನಾ ಯಾತ್ರೆಯ ಕುರಿತು ಅನೇಕ ಚರ್ಚೆಗಳನ್ನು ಮಾಡಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಇದೇ ವೇಳೆ ವಿಭಾಗ ಪ್ರಭಾರೀಗಳಾದ ಈರಣ್ಣ ಕಡಾಡಿ, ರಾಜು ಚಿಕ್ಕನಗೌಡರ,ಅನೇಕ ಹಿರಿಯರು,ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.