ನಟಿ ನಮಿತಾಗೆ ಕಂಕಣ ಭಾಗ್ಯ
ಬಹುಭಾಷಾ ನಟಿ ನಮಿತಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಕೆಲ ದಿನಗಳ ಹಿಂದೆಯಷ್ಟೇ ನಮಿತಾ ನಟ ಶರತ್ ಬಾಬು ಅವರನ್ನ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಇದಾದ ಬಳಿಕ ಸುದ್ದಿಗೆ ಫುಲ್ ಸ್ಟಾಪ್ ಹಾಕಿದ್ದ ನಟಿ ಈಗ ಅಧಿಕೃತವಾಗಿ ಮದುವೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.
ಇದೇ ನವೆಂಬರ್ 24ರಂದು ನಾನು ಮಾಡೆಲ್ ಹಾಗೂ ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವೀರೇಂದ್ರ ಚೌಧರಿಯನ್ನ ಮದುವೆಯಾಗೋದಾಗಿ ಸ್ಪಷ್ಟಪಡಿಸಿದ್ದಾರೆ. ನಮಿತಾ ಗೆಳತಿ ರೈಜಾ ವಿಲ್ಸನ್ ಟ್ವಿಟರ್ನಲ್ಲಿ ವಿಡಿಯೋವೊಂದನ್ನ ಅಪ್ಲೋಡ್ ಮಾಡಿದ್ದು ಇದ್ರಲ್ಲಿ ನಮಿತಾ ತಾನು ಮದುವೆಯಾಗುತ್ತಿರೋ ವಿಚಾರವನ್ನ ತಿಳಿಸಿದ್ದಾರೆ.