ಪ್ರೇಮಾನುಭಂದ
ಬೆಳಗೆದ್ದು ನೋಡದಿದ್ದರೆ
ನಿನ್ನ ಮೊಗವನ್ನ
ಉದಯಿಸದ ಸೂರ್ಯನ
ಕಾಣದ ಭೂಮಿಯಂತಾಗುವೆ ನಾ!
ಎದ್ದೊಡನೆ ಕಣ್ಣುಗಳು ತುಂಬಿಕೊಳ್ಳುವ ರೂಪ ನನ್ನ ಬಾಳಿನ ದೀಪ …
ನಿದ್ರಿಸುತಲಿದ್ದ ನನ್ನ ಪತಿಯ ಹಣೆಗಿಟ್ಟೆ ಮುತ್ತಿನ ಪದಕ!
ಮುದುಡಿಕೊಂಡು ಮಲಗಿದ ಬೆಚ್ಚಗೆ
ಕನಸಕಾಣುವಹಾಗೆ ನಗು ಮೊಗದಲ್ಲಿ ಅರಿವಾಗಲೇ ಇಲ್ಲ ನಾ ಕೊಟ್ಟದ್ದು ನಿಜವೆಂದು ….
ಹಗಲೆಲ್ಲಾ ದುಡಿದು ದಣಿದ ಸೂರ್ಯನು ಇನ್ನಷ್ಟು ಹೊತ್ತು ಮಲಗಳೆಂದೆನಿಸಿದರು …
ಅವನ ಪ್ರೀತಿಯ ಬೆಳಕಲ್ಲಿ ನನ್ನ ಮನದ ಕತ್ತಲ ನೀಗಿಸುವ ಬಯಕೆಗೆ …
ಬಿಸಿ ಕಾಫಿಯ ಮಾಡಿ …ಮಾಡಿದೆನು ಮೋಡಿ …ಮೂಗಿಗೆ ಬಡಿಯಿತು ಕಾಫಿಯ ಸುಗಂಧ ,ಮೆಲ್ಲನೆ ಎದ್ದನು ನನ್ನ ಮುಕುಂದ / ಕಣ್ಬಿಡುವ ಸೂರ್ಯನ ಮೊಗನೋಡುವುದೇ ಆನಂದ …
ಒಂದೆ ಗ್ಲಾಸಲಿ ಕಾಫಿಯ ಕುಡಿಯಲು ಕಾಯುತ್ತಿರುವುದು ಗೊತ್ತು ಎಂದು!
ಸೂರ್ಯನ ಎಳೆಬಿಸಿಲಲಿ ಕರಗಿ ಹೋಗುವುದೆ ಚೆಂದ!
ಇದಲ್ಲವೆ ‘ಪ್ರೇಮಾನುಬಂಧ’ !!
.
.
(ಬರವಣಿಗೆ )
ಇವಾ ಲೇಖಾ
ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??
ivaalekha7717@gmail.com
ವಾಟ್ಸ್ ಆಪ್ No: 9741329365