UK Suddi
The news is by your side.

ಮಾತುಗಳನ್ನೆಲ್ಲ ಮೌನ ಆವರಿಸಿತು – ಸಣ್ಣ ಕತೆ

ಮಮತಾ ಹಾಗು ಮುರಳಿ ಮದುವೆಯ ಕನಸ ನನಸುಮಾಡಲು ತುದಿಗಾಲಲ್ಲಿ ನಿಂತಿದ್ದವರು / ದಿನವೂ ಗಂಟೆಗಟ್ಟಲೆ ಮಾತಾಡುತ್ತಿದ್ದರು ….
ಒಂದು ದಿನ ತುಂಬಾ ಸೊಗಸಾಗಿ ಮಾತಾಡುತಲಿದ್ದ ಮುರಳಿ ಏನು ಹೇಳದೆ ಮೌನ ತಾಳಿದ ….
ಮದುವೆಯ ಆಸೆಯ ತೊರೆದಿದ್ದ ಮಮತಾಳಿಗೆ ಸಂಸಾರದ ಆಸೆಯೂ ಆವರಿಸಿತ್ತು …
ದಿನಗಳು ಕಳೆದರು ಅವನ ಮೌನದ ರಾಗವು ಮಮತಾಳ ಎದೆಬಡಿತವ
ಜೋರಾಗಿಸಿತು/
ತಾನೆ ಕರೆ ಮಾಡಿದರು ಸ್ವೀಕರಿಸಲಿಲ್ಲ ಮುರಳಿ….ನನ್ನಿಂದ ಆದ ತಪ್ಪಾದರೂ ಏನು ಎಂದು ನೊಂದಳು /
ಅವನ ಭರವಸೆಯ ಮಾತುಗಳಿಂದ ಸಂತೋಷವಾಗಿದ್ದ ಅವಳಿಗೆ ಅರ್ಥವಾಗಲೆ ಇಲ್ಲ ಏನೆಂದು / ಮಮತಾಳು ಎಷ್ಟು ಬಾರಿ ಕರೆ ಮಾಡಿದರು ಸ್ವೀಕರಿಸದ ಮುರುಳಿ ಒಮ್ಮೆ ಕರೆ ಸ್ವೀಕರಿಸಿದ / ಯಾತಕ್ಕಾಗಿ ಈ ಮೌನ? ಆಡಿದ ಮಾತುಗಳೆಲ್ಲ ಸುಳ್ಳಾ ? ಎಂಬ ಪ್ರಶ್ನೆ ಗೆ ಅವನಿಂದ ಬಂದ ಉತ್ತರ …. ಆಡಿದ ಮಾತುಗಳೆಲ್ಲವೂ ನಿಜ , ಆದರೆ ನಾನು ಅದಕ್ಕೆ ಸರಿ ಹೋಗುವವನಲ್ಲ! ನಿನಗೆ ನಾನು ಸರಿ ಹೋಗಲಾರೆ ….ಈ ವಿಷಯವನ್ನು ಸಧ್ಯಕ್ಕೆ ಇಲ್ಲಿಯೆ ಬಿಡುವುದು ಸರಿಯಷ್ಟೆ……..
ಮುಂದುವರೆಸುವ ಮಾತುಗಳಿದ್ದರು ಮಮತ ಮಾತಾಡಲಿಲ್ಲ …..
ಪ್ರೀತಿಯ ಮಾತುಗಳನ್ನಾಡುವವರು
ನಿಜರೂಪಕ್ಕೆ ತರಲು ಪೇಚಾಡುವ ನತದೃಷ್ಟರು . ನೂರಾರು ಪ್ರೀತಿ ಮಾತುಗಳನ್ನು ಆಡಿ ದೂರವಾಗಿ ಅದರ ನೆನಪಲಿ ನೋವ ಪಡುವವರಿಗೆ ಅದರ ನೋವು ಅರ್ಥವಾಗುವುದು!
ಆಡಿದ ಮಾತುಗಳೆಲ್ಲಾ ಮೌನದಲಿ ಮರೆಯಾಯಿತು …. ಬೇಸರದ ಕರಿ ಮೋಡ ಆವರಿಸಿತು!

 .

.

❤ಪ್ರೀತಿ ಇಂದ ಪ್ರೀತಿಯ ❤
❤ಹಂಚ ಬೇಕು ಮಾನವ ❤
ನಿಮ್ಮ ಅನಿಸಿಕೆಯನ್ನು ??
ಈ ವಾಟ್ಸ್ ಆಪ್ number ಗೆ ಕಳಿಸಿ
೯೯೪೫೬೪೫೯೮೫ (9945645985)
??ಧನ್ಯವಾದಗಳೊಂದಿಗೆ ??
? ವಾಣಿ ಶೆಟ್ಟಿ ?

 

Comments