UK Suddi
The news is by your side.

ಮಹಾದಾಯಿ ಯೋಜನೆ : ವಾಟಳ್ ನೇತೃತ್ವದಲ್ಲಿ ಡಿಸೆಂಬರ್ 9ರಂದು ಗೋವಾಕ್ಕೆ ಮುತ್ತಿಗೆ

ಹುಬ್ಬಳ್ಳಿ:ಮಹಾದಾಯಿ ಯೋಜನೆಗಾಗಿ ಆಗ್ರಹಿಸಿ ಡಿಸೆಂಬರ್ 9ರಂದು ಗೋವಾಕ್ಕೆ ಮುತ್ತಿಗೆ ಹಾಕುತ್ತೇವೆ ನಂತರ ಪ್ರತಿಭಟನೆ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಮಹಾದಾಯಿ ವಿಷಯದಲ್ಲಿ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಲಿಸಲು ವಿಫಲರಾಗಿದ್ದಾರೆ. ಹೀಗಾಗಿಯೇ ಲೋಕಸಭೆಯಲ್ಲಿ ಕಳಸಾ ಬಂಡೂರಿ ವಿಷಯವಾಗಿ ಚರ್ಚೆ ನಡೆದಿಲ್ಲ. ಅಲ್ಲದೇ ರಾಜ್ಯದ ಸಂಸದರು ಒಂದು ಬಾರಿಯೂ ಸಭಾತ್ಯಾಗ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments