UK Suddi
The news is by your side.

ಯಡಿಯೂರಪ್ಪಗೆ ಕಪ್ಪು ಭಾವುಟ ತೋರಿಸಿ ರೈತರ ಸಾಲ ಮನ್ನಾ ಮಾಡದ ಹಾಗೂ ಮಹಾದಾಯಿ ವಿಷಯದಲ್ಲಿ ರಾಜ್ಯದ ರೈತರಿಗೆ ಮೋಸ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಜೆ ಡಿ ಎಸ್ ನಿಂದ ಧರಣಿ.

ಬೆಳಗಾವಿ:ಪರಿವರ್ತನಾ ಯಾತ್ರೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಕಪ್ಪು ಭಾವುಟ ತೋರಿಸಿ ರೈತರ ಸಾಲ ಮನ್ನಾ ಮಾಡದ ಹಾಗೂ ಮಹಾದಾಯಿ ವಿಷಯದಲ್ಲಿ ರಾಜ್ಯದ ರೈತರಿಗೆ ಮೋಸ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಯಡಿಯೂರಪ್ಪನವರ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.

ಧರಣಿಯ ಮುಂದಾಳತ್ವವನ್ನು ಬೆಳಗಾವಿ ಜಿಲ್ಲೆಯ ಜೆ ಡಿ ಎಸ್ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ ವಹಿಸಿದ್ದರು.

ಇದೇ ವೇಳೆ ಧರಣಿನಿರತ ಪ್ರತಿಭಟನಾಕಾರರನ್ನು ಸ್ಥಳದಿಂದ ಪೋಲೀಸರು ಬಂಧಿಸಿ  ನಂತರ ಬಿಡುಗಡೆ ಮಾಡಿದರು.

Comments