ಭಾರತದ 20 ವರ್ಷದ ಮಾನುಷಿ ಚಿಲ್ಲಾರ್ ಮಿಸ್ ವರ್ಲ್ಡ್ 2017
ಸನ್ಯಾ(ಚೀನಾ): ಭಾರತದ 20 ವರ್ಷದ ಮಾನುಷಿ ಚಿಲ್ಲಾರ್ ಮಿಸ್ ವರ್ಲ್ಡ್ 2017 ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 16 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ವರ್ಲ್ಡ್ ಕಿರೀಟ ಲಭಿಸಿದೆ.
2000 ಇಸವಿಯಲ್ಲಿ ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಮಿಸ್ ವಲ್ಡ್ ಆಗಿ ಆಯ್ಕೆಯಾಗಿದ್ದರು. ಚೀನಾದ ಸನ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 108 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಮಾನುಷಿ ಮಿಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದಾರೆ.