UK Suddi
The news is by your side.

ಪರೋಪಕಾರವೇ ಜೀವನದ ಧ್ಯೇಯವಾಗಲಿ: ಸದ್ಗುರು ಸಮರ್ಥ ಶಿವಾನಂದರು

ಸುದ್ದಿ: ಮಹಾಂತೇಶ ಹೊಂಗಲ್
ಗೋವನಕೊಪ್ಪ : ‘ಮಾನವ ಜನ್ಮವು ನಮ್ಮ ಪೂರ್ವದ ಪುಣ್ಯಫಲದಿಂದ ದೊರಕಿದ್ದು ಅದನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ನಾವೆಲ್ಲ ಪರಹಿತದ ಚಿಂತನೆಯಲ್ಲಿ ತೊಡಗಬೇಕು’ ಎಂದು ಮನಿಹಾಳ ಸುರೇಬಾನದ ಶ್ರೀಗುರು ಸಮರ್ಥ ಶಿವಾನಂದರು ಬೋಧನೆ ಮಾಡಿದರು.
    ಗೋವನಕೊಪ್ಪ ಗ್ರಾಮದ ಪ್ರಗತಿಪರ ರೈತ, ಲಿಂಗೈಕ್ಯ ಶರಣ ಶ್ರೀ.ಸಣ್ಣವೀರಪ್ಪ ಹೊಂಗಲ ರವರ ಸ್ಮರಣಾರ್ಥವಾಗಿ ಸ್ಥಾಪಿಸಲಾದ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಸಂದರ್ಭದಲ್ಲಿ  ‘ಕೆಡುವ ಕಾಯದ ಸಫಲತೆ ಯಾವುದು? ‘ ಎಂಬ ವಿಷಯದ ಕುರಿತು ಚಿಂತನೆ ಮಾಡಿದರು. 

  ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ. ಮಹಾಂತೇಶ ಹೊಂಗಲ -‘ ನಾವು ಸ್ಥಾಪಿಸಿದ ಎಸ್.ಸಿ.ಹೆಚ್.(ಶೇರಿಂಗ್ ಆ್ಯಂಡ್ ಕೇರಿಂಗ್ ಫಾರ್ ಹ್ಯೂಮಾನಿಟಿ) ಪ್ರತಿಷ್ಠಾನವು ಗ್ರಾಮೀಣ ಭಾಗದ ಮಕ್ಕಳು, ಮಹಿಳೆಯರು, ಯುವಕರು ಹಾಗೂ ರೈತರನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವಲ್ಲಿ ಪೂರಕವಾಗಿ ಕೆಲಸ ಮಾಡಲಿದೆ’ ಎಂದು ಹೇಳಿದರು. ಈಗಾಗಲೇ ಪ್ರತಿಷ್ಠಾನದ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿಯನ್ನು ಆರಂಭಿಸಿದ್ದು, ದೂರದ ಶಹರಗಳಿಗೆ ಹೋಗಿ ಸಾಕಷ್ಟು ಹಣ ನೀಡಿ ತರಬೇತಿ ಪಡೆಯುವುದನ್ನು ಇದು ತಪ್ಪಿಸಲಿದೆ, ಇದಲ್ಲದೇ ಪ್ರತಿಷ್ಠಾನದ ವತಿಯಿಂದ ೫೦೦೦ ಪುಸ್ತಕಗಳನ್ನು ಹೊಂದಿರುವ ಸುಸಜ್ಜಿತ ಗ್ರಂಥಾಲಯವನ್ನು  ಆರಂಭಿಸಲಾಗಿದ್ದು ವಿದ್ಯಾರ್ಥಿಗಳು ಉಚಿತವಾಗಿ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಡಲಾಗಿದೆ ಎಂದರು.

  ಕಾರ್ಯಕ್ರಮದ ಉದ್ಘಾಟಕರಾಗಿ  ಆಗಮಿಸಿದ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ವ್ಹಿ.ಎಸ್.ಸಾಧುನವರ ಮಾತನಾಡಿ ‘ ಈ ಪ್ರತಿಷ್ಠಾನವು ಒಳ್ಳೆಯ ಉದ್ದೇಶಗಳೊಂದಿಗೆ ಕಾರ್ಯಾರಂಭ ಮಾಡಿದ್ದು ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ಅಭಿವೃದ್ಧಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ‘ ಎಂದರು.
 ಕಾರ್ಯಕ್ರಮದಲ್ಲಿ ಸತ್ಸಂಗ ಚಿಂತಕರಾಗಿ ಶರಣ ಶ್ರೀ ಸೋಮಪ್ಪ ಕಬ್ಬೂರ ಹಾಗೂ ಸೊಟಕನಾಳ ಗ್ರಾಮದ ಶರಣ ಶ್ರೀ. ಮಲ್ಲಪ್ಪಜ್ಜ ಹೂಗಾರ ತಮ್ಮ ಅನುಭಾವವನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶರಣ ಶ್ರೀ. ಬಸವರಾಜ ಹೊಂಗಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾರೋಬೆಳವಡಿಯ ಚಿಂತಕರಾದ ಶರಣ ಶ್ರೀ. ಬೆಟಗೇರಿ ಗುರುಗಳು ಹಾಗೂ ಅಧ್ಯಕ್ಷೆ ದೀಪಾ ಮ.ಹೊಂಗಲ ಉಪಸ್ಥಿತರಿದ್ದರು. 

  ಪ್ರತಿಷ್ಠಾನದ ಕಾರ್ಯದರ್ಶಿ ಕುಮಾರಿ. ಸವಿತಾ ತಿಗಡಿ ಸ್ವಾಗತಿಸಿದರು. ಶಿಕ್ಷಕ ಆಯ್.ಎಮ್.ಮುಲ್ಲಾ ನಿರೂಪಿಸಿದರು. ಡಾ.ಶಿವಾನಂದ ಹೊಂಗಲ ವಂದಿಸಿದರು. 

Comments