UK Suddi
The news is by your side.

ನೇಕಾರರು ಬರೀ ನಾಲ್ಕು ಗೋಡೆಗಳ ಮದ್ಯೆ ಕೂತರೇ ಸಾಲದು ನೇಕಾರರ ರಕ್ಷಣಾ ವೇದಿಕೆಯ ಜೊತೆಗೂಡಿ ಉಗ್ರ ಹೋರಾಟಕ್ಕೆ ಬೆಂಬಲ ನೀಡಬೇಕು:ನೇಕಾರ ರಕ್ಷಣಾ ವೇದಿಕೆ ಅಧ್ಯಕ್ಷ ಕುಮಾರಸ್ವಾಮಿ.

ಹಾಸನ:ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ವತಿಯಿಂದ 25 ನೇ ನವೆಂಬರ್ ಬೆಳಗ್ಗೆ ಹಾಸನ ಜಿಲ್ಲಾ ಘಟಕದ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.

ಅರಸೀಕೆರೆ ತಾಲುಕಿನ ಚಿಕ್ಕಹಲ್ಕೂರು ಗ್ರಾಮದಲ್ಲಿ ಮೊದಲಿಗೆ “ಕನ್ನಡ ರಾಜ್ಯೋತ್ಸವ” ಪ್ರಯುಕ್ತ ಧ್ವಜಾರೋಣವನ್ನು ನೇಕಾರರ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ನೇಕಾರರ ಸಹಕಾರ ಸಂಘದ ಅದ್ಯಕ್ಷರಾದ ಬಿಳಿಕಲ್ ನಟರಾಜ್  ನೆರೆವೇರಿಸಿದರು.
ಬಳಿಕ ಗ್ರಾಮದಲ್ಲಿ ಪೂರ್ವಭಾವಿ ಸಭೆ ನೆಡಸಲಾಯಿತು.. ಸಭೆಯಲ್ಲಿ ಮೊದಲಿಗೆ ಆರಂಭದಲ್ಲಿ ಆನಂದ್ ರವರು ಪ್ರಾರ್ಥನೆ ನಂತರ ಹೆಚ್. ಕೆ ರಮೇಶ ಸ್ವಾಗತಿಸಿದರು.

ಮೋಹನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಪಂ ಸದಸ್ಯ ಮಹೇಶ್ವರಪ್ಪ ಮಾತನಾಡಿ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಹಾಗೂ ನಿವೇಶನ ವಸತಿ ಕೊರತೆ ಬಹಳಿದ್ದು ಈ ಕೆಲಸ ನಿಮಿತ್ತ ಶಾಸಕರ ಗಮನಕ್ಕೆ ತರಲಾಗುವುದು ಎಂದರು.

ಗ್ರಾಪಂ ಅದ್ಯಕ್ಷ ಸಿ.ಡಿ ಕುಮಾರ್  ಮಾತನಾಡಿ ನೇಕಾರರರಿಗೆ ತಲುಪುವ ಸರ್ಕಾರದ ಸವಲತ್ತುಗಳನ್ನು ನೇಕಾರರ ರಕ್ಷಣಾ ವೇದಿಕೆ ಖುದ್ದಾಗಿ ನಿಂತು ನೇರವೇರಿಸಲು ಮನವಿ ಮಾಡಿ ರಾಜ್ಯಾದ್ಯಕ್ಷರಿಗೆ ಮನವಿ ನೀಡಿದರು.
ನೇಕಾರ ರಕ್ಷಣಾ ವೇದಿಕೆ ಉಪಾದ್ಯಕ್ಷರಾದ ಜಯದೇವ್ ಮಾತನಾಡಿ ಜಗತ್ತಿಗೆ ರೈತ ಮತ್ತು ನೇಕಾರ ಎರಡು ಕಣ್ಣುಗಳು ಎಂದು ಎಲ್ಲಾ ಪಕ್ಷಗಳು ಬರೀ ಭಾಷಣಕ್ಕೆ ಸೀಮಿತ ಮಾಡುತ್ತಿವೆ ಆದರೆ ಒಂದು ದಿನ ಊಟವಿಲ್ಲದೆ ಇರಬಹುದು ಆದರೇ ಒಂದೇ ಒಂದು ಅರಗಳಿಗೆ ಬಟ್ಟೆ ಇಲ್ಲದೇ ಇರಲಾಗುತ್ತದೆಯಾ ಆದರೆ ಮಾನ ಮುಚ್ಚವ ನಮ್ಮ ನೇಕಾರರ ಬಗ್ಗೆ ಯಾವುದೇ ಸರ್ಕಾರಗಳಿಗೆ ಕಿಂಚಿತ್ತು ಕಿಮ್ಮತ್ತಿಲ್ಲ ಹಾಗಾಗೀ ನಮ್ಮ ನೇಕಾರರ ರಕ್ಷಣಾ ವೇದಿಕೆಯ ಸಂಘಟನೆಯನ್ನು ಬದ್ರಪಡಿಸಲು ಸರ್ವರೂ ಪಣತೊಡಬೇಕು.ಮುಂದಿನ ಪೀಳಿಗೆಗೆ ನಾವುಗಳು ಮಾದರಿಯಾಗಬೇಕು ಎಂದರು.

ರಾಜ್ಯಾದ್ಯಕ್ಷರಾದ ಕುಮಾರಸ್ವಾಮಿ ಮಾತನಾಡಿ ಪ್ರತೀ ಜಿಲ್ಲೆಗಳಲ್ಲೂ ಸಹ ಮದ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ.

ಸಮಾಜದ ನ್ಯೂನತೆಗಳನ್ನೂ ಸರಿಪಡಿಸಲು ಎಲ್ಲರೂ ಕಾರ್ಯಗತವಾಗಬೇಕು. ಈಗಾಗಲೇ ನೇಕಾರರ ರಕ್ಷಣಾ ವೇದಿಕೆ ಇಪ್ಪತ್ತು ಜಿಲ್ಲೆಗಳ ಪ್ರವಾಸವನ್ನು ಮುಗಿದಿದ್ದು ರಾಜ್ಯವಾಪಿ ಸಂಘಟನೆ ನೆಡಿಯುತ್ತಿದೆ.

ನೇಕಾರರು ಬರೀ ನಾಲ್ಕು ಗೋಡೆಗಳ ಮದ್ಯೆ ಕೂತರೇ ಸಾಲದು ನೇಕಾರರ ರಕ್ಷಣಾ ವೇದಿಕೆಯ ಜೊತೆಗೂಡಿ ಉಗ್ರ ಹೋರಾಟಕ್ಕೆ ಬೆಂಬಲ ನೀಡಿದರೆ ಸರ್ಕಾರದ ಸವಲತ್ತು ಪಡೆಯಲು ಅನುಕೂಲವಾಗುತ್ತದೆ.

ನೇಕಾರರಿಗೆ ನೇಕಾರರ ಸೇವಾ ಕೇಂದ್ರದಲ್ಲಿ ನೇಕಾರ ವಿಮೆ ಹಾಗೂ ಇನ್ನಿತರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುಕೂಲತೆಗಳನ್ನು ಕೊಡಿಸಲು ಕಂಕಣಬದ್ದರಾಗಿ ಶ್ರಮಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವೆಂದರು.

ನೇಕಾರರ ಸಮಸ್ಯೆ ಬೆಟ್ಟದಷ್ಟಿದೆ ಆದರೆ ಇದನ್ನು ಬಗೆಹರಿಸುವ ಶಕ್ತಿ ಇರುವ ಏಕೈಕ ಸಂಘಟನೆ ನಮ್ಮದಾಗಿದ್ದು ಇನ್ನಾದರು ನೇಕಾರರು ಹೆಚ್ಚೆತ್ತುಕೊಂಡು ನಮ್ಮ ಸಂಘಟನೆಗೆ ಕೈಜೊಡಿಸಿ ಅತೀ ಶೀಘ್ರದಲ್ಲೆ 

ಹಾಸನ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ನೆಡೆಯಲಿದ್ದು ಸೇವಾ ಮನೋಬಾವ ಇರುವ ನಾಯಕರನ್ನು ನೇಮಕ ಮಾಡಲಾಗುವುದು ಎಂದರು ಹಾಗು ಸಹ್ಶಾದ್ರಿ ದೇವರಾಜರವರನ್ನ ಹಾಸನ ಜಿಲ್ಲಾಧ್ಯಕ್ಷರಾಗಿ ನೇಮಾಕ ಮಾಡಲಾಗುವುದು.ಮಂಗಳೂರು ಹಾಗು ಚಿಕ್ಕಮಗಳೂರು ಜಿಲ್ಲೆಯ ಕೆ ಎನ್ ಆರ್ ವಿ ಸಭೇ ಡಿಸಂಬರ್ ನಲ್ಲಿ ಕರೆಯಲಾಗಿದೆ.

ನೇಕಾರ ಯುವ ನಾಯಕ ರಾಜೇಶ್ ನಿರೂಪಿಸಿದರು. 
ಈ ಸಂಧರ್ಬದಲ್ಲಿ ಗ್ರಾಮದ ಮುಖಂಡರಾದ ಮುರುಳಿ ಸಿದ್ದರಾಜು ಕಾಂತರಾಜು ರಂಗನಾಥ್ ನಟೇಶ್ ಅರುಣ ಹರೀಶ ಕೃಷ್ಣಪ್ಪ ಸಿ.ಆರ್ ಕುಮಾರ ಇನ್ನಿತರಿದ್ದರು.

Comments