UK Suddi
The news is by your side.

ಮನಗುಂಡಿ ಹುಲಿಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲಾಡಳಿತ.

ಧಾರವಾಡ:ಮಾವೋವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಮನಗುಂಡಿ ಗ್ರಾಮ್ ಮಂಜುನಾಥ ಜಕ್ಕನವರ ಅವರ ಪಾರ್ಥೀವ ಶರೀರ ಮಂಗಳವಾರ ಬೆಳಿಗ್ಗೆ ಧಾರವಾಡಕ್ಕೆ ಆಗಮಿಸಿತು. 

ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಮಂಜುನಾಥ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ,ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಅನೇಕರು ಮಂಜುನಾಥ ಅವರ ಅಂತಿಮ ದರ್ಶನ ಪಡೆದರು. 

ನಂತರ ಕ್ರೀಡಾಂಗಣದಿಂದ ಮನಗುಂಡಿವರೆಗೂ ಪಾರ್ಥೀವ ಶರೀರವನ್ನು ಸೇನೆಯ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಮನಗುಂಡಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ನಾಲ್ಕು ನೂರಕ್ಕೂ ಅಧಿಕ ಯುವಕರು ಬೈಕ್ ರ್ಯಾಲಿ ನಡೆಸಿದರು.

ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದಲ್ಲು ಜಮಾಯಿಸಿದ್ದರು. ಮನಗುಂಡಿ ಹುಲಿಗೆ ಜೈವಾಗಲಿ, ಮತ್ತೆ ಹುಟ್ಟಿ ಬಾ ಮಂಜುನಾಥ, ಭೋಲೋ ಭಾರತ ಮಾತಾ ಕೀ ಜೈ ಎನ್ನು ಘೋಷಣೆಗಳು ಮೊಳಗಿದವು. ಮನಗುಂಡಿಯಲ್ಲಿ ಸಂಜೆ ಸಕಲ ಸರ್ಕಾರಿ ಗೌರವ ಮರ್ಯಾದೆಗಳೊಂದಿಗೆ ಮಂಜುನಾಥ ಅವರ ಅಂತ್ಯಕ್ರಿಯೆ ನಡೆಯಲಿದೆ. 

ಯೋಧನ ಪಾರ್ಥೀವ ಶರೀರ ಧಾರವಾಡಕ್ಕೆ ಆಗಮಿಸುತ್ತಿದ್ದಂತೆ ಅವರ ಕುಟುಂಬಸ್ಥರು ರೋಧಿಸುತ್ತಿದುದನ್ನು ಕಂಡರೆ ಎಂಥವರ ಕಣ್ಣುಗಳು ಕೂಡ ಒದ್ದೆಯಾದವು. ವೀರಮರಣ ಅಪ್ಪಿದ ಯೋಧನಿಗೆ ನಮ್ಮದೊಂದಿ ಸಲಾಂ ಎಂದು ಅಲ್ಲಿ ಸೇರಿದ್ದವರೆಲ್ಲರೂ ಹೇಳುತ್ತಿದುದು ಸಾಮಾನ್ಯವಾಗಿತ್ತು. ಸೇನೆಯಿಂದಲೂ ಹಿರಿಯ ಅಧಿಕಾರಿಗಳು ಬಂದಿದ್ದರು. ಸದ್ಯ ಪಾರ್ಥೀವ ಶರೀರ ಮನಗುಂಡಿ ಗ್ರಾಮಕ್ಕೆ ತೆರಳಿದೆ.

-ಶಶಿಧರ ಬುದ್ನಿ

Comments