ಮುಧೋಳದಲ್ಲಿ ಪರಿವರ್ತನೆಯ ಮದ್ದಳೆ, ಎಲ್ಲೆಡೆ ಯಡಿಯೂರಪ್ಪನವರ ಯಾತ್ರೆಯದೇ ಕಹಳೆ.
ಬಾಗಲಕೋಟ:ಬಿಜೆಪಿಯ ಪರಿವರ್ತನಾ ಯಾತ್ರೆಯ 19ನೆಯ ದಿನವಾದ ಇಂದು ಮುಧೋಳದಲ್ಲಿ ಯಡಿಯೂರಪ್ಪನವರಿಗೆ ಭವ್ಯ ಸ್ವಾಗತ ದೊರಕಿತು. ಮೈಲುದ್ದ ಸಾಲಿನಲ್ಲಿ ಮಾತೆಯರು ಪೂರ್ಣಕುಂಭ, ಕಳಶಗಳ ಮೆರವಣಿಗೆಯಲ್ಲಿ ಕರ್ನಾಟಕದ ಜನಪ್ರಿಯ ನಾಯಕರಾದ ಯಡಿಯೂರಪ್ಪನವರನ್ನು ಬರಮಾಡಿಕೊಂಡರು.
ತಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಸ್ಮರಿಸುವ ಇಲ್ಲಿನ ಮಹಾಜನತೆ ಕೃತಜ್ಞನತಾ ಭಾವನೆಯೊಂದಿಗೆ ಬಿಜೆಪಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು. ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪನವರು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ತಮ್ಮ ಪಕ್ಷ ಬದ್ಧವಾಗಿದೆ.ಅಧಿಕಾರಕ್ಕೆ ಬಂದರೆ ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಅನಂತ್ ಕುಮಾರ್, ಅನಂತ್ ಕುಮಾರ್ ಹೆಗಡೆ, ಗೋವಿಂದ್ ಕಾರಜೋಳ, ಅರವಿಂದ ಲಿಂಬಾವಳಿ, ಮುರುಗೇಶ್ ನೀರಾಣಿ, ಮುಂತಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು.