ನೀ ತಂದ ಹುಣ್ಣಿಮೆಯ ದಿನಗಳ
ನೀ ತಂದ ಹುಣ್ಣಿಮೆಯ ದಿನಗಳ
ನನ್ನ ಕತ್ತಲ ಬಾಳಿಗೆ/
ಮರೆಯುವುದು ಹೇಗೆ ಇನಿಯ
ನಿನ್ನ ಮುಗುಳುನಗೆಯನ್ನು /
ನಾ ಹುಡುಕುವುದು ಹೇಗೆ
ಕೊನೆವರೆಗೆ ಆ ನಿನ್ನ ನಗುವನ್ನು?
ಒಣಗಿದ ಭೂಮಿಗೆ ಜೀವಗಂಗೆಯಾಗಿ ಬಂದೆ ನೀ ಅಂದು….
ಮರೆಯಾಗಿ ಹೋದೆ ಏಕೆ ಮಿಂಚಿನಂತೆ
ನನ್ನ ಮನದಲ್ಲಿ ನೀ ಇಂದು…!
ನನಗಾಗಿ ಬಂದ ಪ್ರೀತಿಯ
ತಾಯಿ ತಂದೆ ಬಂಧು ಸ್ನೇಹಿತ ಎಂಬ ಸಂಬಂದ ನೀನೇ ಎಂದುಕೊಂಡೆ ನಾನು/
ಹೇಳದೆ ಕೇಳದೆ ಒಂಟಿ ಆಗಿ ನನ್ನ ಬಿಟ್ಟು ಏಕೆ ಹೋದೆ ನೀನು ….
ನಿನ್ನ ಹೆಸರ ಗಾಳಿ ಇಂದ ನನ್ನ ಉಸಿರ ಬೆಸೆದೆ ನೀ….
ಆ ತಂಪುಗಾಳಿಯ ನೆನಪಲ್ಲಿ ಕಾಯುತಿರುವೆ ನಿನ್ನ ದಾರಿಯಲ್ಲಿ ನಾನು..
ನನ್ನ ವಿರಹಕೆ ಈ ನಿನ್ನ ಪ್ರೀತಿಯೇ ಕಡಿವಾಣ ….
ನಿನ್ನ ಸನಿಹದ ಮದುರ ಕ್ಷಣಗಳಿಗಾಗಿ ಕಾಯುತ್ತಿರುವ ನಿನ್ನ ಪ್ರೇಮಿ ನಾ… ಬಾಳಸಂಗಾತಿ ನಾ….!!
.
.
(ಬರವಣಿಗೆ )
ಇವಾ ಲೇಖಾ
ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ
ivaalekha7717@gmail.com
ವಾಟ್ಸ್ ಆಪ್ No: 9741329365