UK Suddi
The news is by your side.

ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ್ದು ಸರಿಯಲ್ಲ:ಬಿ ಎಸ್ ಯಡಿಯೂರಪ್ಪ.

ಕಲ್ಬುರ್ಗಿ:ಪರಿವರ್ತನಾಯಾತ್ರೆಯ 24ನೆಯ ದಿನವಾದ ಇಂದು ಕಲ್ಬುರ್ಗಿ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸಮಾವೇಶ ನಡೆಸಿದರು. 

ನಂತರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪನವರು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯನ್ನು ಸಿದ್ದರಾಮಯ್ಯನವರ ಸರ್ಕಾರ ಕಡೆಗಣಿಸಿದೆ. ಇಂತಹ ರೈತವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಜನರು ಕಾತುರರಾಗಿದ್ದಾರೆ ಎಂದು ವಾಕ್ಪ್ರಹಾರ ನಡೆಸಿದರು. 

ಕಲಬುರ್ಗಿ ಗ್ರಾಮಾಂತರದಲ್ಲಿ ಪರಿವರ್ತನಾ ಯಾತ್ರೆ ಉದ್ದೇಶಿಸಿ ಬಿ.ಎಸ್.ಯಡಿಯೂರಪ್ಪನವರ ಭಾಷಣದ ಪ್ರಮುಖಾಂಶ:

ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯದ ಮೇಲೆ ಅಭಿವೃದ್ಧಿ – ಬಿಜೆಪಿ ಗುರಿ

• ಇದರಿ0ದ ಸುಮಾರು 2 ಲಕ್ಷ ಉದ್ಯೋಗ ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಪರೋಕ್ಷವಾಗಿ ಎರಡೂ ಜಿಲ್ಲೆಗಳ ಸುಮಾರು 3 ಲಕ್ಷಜನರಿಗೆ ಅನುಕೂಲ ಕಲ್ಪಿಸಲಿದೆ

• 16 ವರ್ಷಗಳ ನ0ತರ ಪ್ರಧಾನಿ ಮೋದಿಯವರಿ0ದಾಗಿ ಪೂರ್ಣಗೊ0ಡ 110 ಕಿ.ಮೀ ಬೀದರ್-ಕಲ್ಬುರ್ಗಿ ರೈಲು ಮಾರ್ಗ, ಈ ಭಾಗದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಬರೆಯಲಿದೆ.

• ಹೈ.ಕರ್ನಾಟಕದಲ್ಲಿ ಕೈಗಾರಿಕೀಕರಣ ಮತ್ತು ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.

• ದಕ್ಷಿಣ ರಾಜ್ಯಗಳಿ0ದ ದೆಹಲಿ ಈಗ ಸುಮಾರು 380 ಕಿ.ಮೀ ನಷ್ಟು ಕಡಿಮೆಯಾಗಿದೆ

• ಹಿ0ದೆ ನಮ್ಮ ಸರ್ಕಾರವಿದ್ದಾಗ, ಗ0ದೋರಿ ನಾಲಾ ಅಣೆಕಟ್ಟನ್ನು ಆಶ್ರಯಿಸಿ ಅನುμÁ್ಠನಗೊ0ಡ 300 ನೀರಾವರಿ ಯೋಜನೆಗಳು 7,943 ಹೆಕ್ಟೇರ್ ಕೃಷಿ ಭೂಮಿಗೆ

• ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಕ್ಷೇತ್ರದ ಶೇ.40% ಗ್ರಾಮಗಳಿಗೆ ಕುಡಿಯುವ ನೀರು, ಉತ್ತಮ ರಸ್ತೆ ಮತ್ತು ಒಳಚರ0ಡಿ ವ್ಯವಸ್ಥೆಯನ್ನು ಕಲ್ಪಿಸಿದ್ದೆವು. ನೀರುಣಿಸುತ್ತಿದೆ.

• ಶಹಾಬಾದ್‍ಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು 40 ಕೋಟಿರೂ. ಮ0ಜೂರು ಮಾಡಿದ್ದೆವು.

• ಮಹಗಾ0ನಲ್ಲಿ ಪಿಯುಸಿ, ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡಿದ್ದೇವೆ. ಹೈನುಗಾರಿಕೆ ಕೋರ್ಸ್ ಕೂಡ ಪ್ರಾರ0ಭವಾಗಿದ್ದು ಉದ್ಯೋಗ ಪಡೆಯಲು ಸಹಕಾರಿಯಾಗಿದೆ.

• ಜಿಲ್ಲೆಯಲ್ಲಿ ಬ0ಜಾರಾ ಭವನ ನಿರ್ಮಿಸಲು 2 ಕೋಟಿರೂ. ಮ0ಜೂರು ಮಾಡಿದ್ದೆ.

• ಎಲ್ಲಾ ಜಾತಿ, ವರ್ಗ, ಸಮುದಾಯಗಳನ್ನು ಸಮನಾಗಿ ಕ0ಡು, ಆಡಳಿತ ನಡೆಸಿದ್ದೇವೆ.

• 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ ನಮಗೆ ಭಾರಿ ಬೆ0ಬಲ ನೀಡಿದ್ದೀರಿ.

• ಮು0ದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ನಮಗೆ ನಿಮ್ಮ ಆಶೀರ್ವಾದ ಅತ್ಯಗತ್ಯವಾಗಿದೆ.

• ಸ್ವಚ್ಛ, ದಕ್ಷ, ಪ್ರಾಮಾಣಿಕ ಸರ್ಕಾರ ಇಲ್ಲಿ ಅಧಿಕಾರಕ್ಕೆ ಬರಬೇಕು. ಇದಕ್ಕೆ ನಿಮ್ಮ ಆಶೀರ್ವಾದ ಬೇಡಲು ನಾವಿಲ್ಲಿಗೆ ಬ0ದಿದ್ದೇವೆ ಎಂದರು.

ಇದ್ದಕ್ಕೂ ಮುನ್ನ ಕಲ್ಬುರ್ಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಿದ್ದರಾಮಯ್ಯನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ್ದು ಸರಿಯಲ್ಲ ಎಂದು ಖಂಡಿಸಿದರು. 

ಈ ಸಂದರ್ಭದಲ್ಲಿ ಮುಖಂಡರುಗಳಾದ ಶ್ರೀರಾಮುಲು, ಗೋವಿಂದ್ ಕಾರಜೋಳ,ಅರವಿಂದ್ ಲಿಂಬಾವಳಿ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Comments