UK Suddi
The news is by your side.

10 ಕ್ವಿಂಟಲ್‌ ಜೋಳದ  ಚೀಲ ಹಾಕಿ 11 ಕಿಮೀ ಬಂಡಿ ಎಳೆದ ಭೂಪ!

ಬಾಗಲಕೋಟ: 10 ಕ್ವಿಂಟಲ್‌ ಜೋಳದ ಚೀಲಗಳನ್ನು ಬಂಡಿ ಮೇಲೆ ಹಾಕಿಕೊಂಡು 11ಕಿ.ಮೀ. ಬಂಡಿ ಎಳೆಯುವುದು ಸಾಧ್ಯವೇ..?
ಇದು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಶಿರೂರ್ ಗ್ರಾಮದ 22ರ ಹರೆಯದ ಸಾಹಸಿ  ಯಲ್ಲಪ್ಪ ಹಿರೇಕುಂಬಿ.
ಇಲ್ಲಿಯ  ಶ್ರೀ ಸಿದ್ದೇಶ್ವರ ಹಾಗೂ  ಲಿಂ ಸಿದ್ಧಲಿಂಗ ಶ್ರೀಗಳ ಜಾತ್ರೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡ ಈ ಸಾಹಸ ಪ್ರದರ್ಶನದಲ್ಲಿ ಯಲ್ಲಪ್ಪ ಹಿರೇಕುಂಬಿ ಶಿರೂರಿನಿಂದ ಕಮತಗಿಯವರೆಗೆ ಬಂಡಿ ಎಳೆದು ಸೈ ಎನಿಸಿಕೊಂಡಿದ್ದಾನೆ. 
ಬಸ್‌ ನಿಲ್ದಾಣ ಸಮೀಪದ ಸಿದ್ಧಲಿಂಗ ಶ್ರೀಗಳ ಮೂರ್ತಿಗೆ ಪೂಜೆ ಸಲ್ಲಿಸಿ ಹಾದಿ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಬೆಳಗ್ಗೆ 7.30ಕ್ಕೆ ನೊಗವನ್ನು ಹೆಗಲೇರಿಸಿಕೊಂಡು ಶಿರೂರಿನಿಂದ ಹೊರಟ ಈತ ಬೆಳಗ್ಗೆ 9.40ಕ್ಕೆ 11 ಕಿ.ಮೀ ಅಂತರದ ಕಮತಗಿಯ ಶ್ರೀ ಹೊಳೆ ಹುಚ್ಚೇಶ್ವರ ಮಠ ತಲುಪಿ ಎಲ್ಲರ ಗಮನ ಸೆಳೆದಿದ್ದಾನೆ. ಗ್ರಾಮಸ್ಥರು ಯುವಕನ ಸಾಹಸಕ್ಕೆ ಮೆಚ್ಚಿ ಮೆರವಣಿಗೆ ಮಾಡಿ ಸನ್ಮಾನಿಸಿ ಕಾಣಿಕೆ ನೀಡಿದ್ದಾರೆ.
-ಚಂದ್ರಶೇಖರ ಜೋಳದರಾಶಿ

Comments