UK Suddi
The news is by your side.

ಕೊಟ್ಟು ನಿಷ್ಟುರವಾಗುವ ಬದಲು ಕೊಡದಿರುವುದೇ ಮೇಲು!!

ಒಂದು ದಿನ ನಯನ ತನ್ನ ಸ್ನೇಹಿತೆಯಾದ ಈಶ್ವರೀಯ ಮಗಳ ಮದುವೆಗೆಂದು ತನ್ನಲ್ಲಿದ್ದ ಹಣವನ್ನು ಸಾಲವಾಗಿ ಕೊಟ್ಟಿದ್ದಳು …. ನಯನ ತನ್ನ ಮಗಳ ವಿದ್ಯಾಭ್ಯಾಸ ಹಾಗು ಮದುವೆಯ ಸಲುವಾಗಿ ಕೂಡಿಟ್ಟ ಹಣವದು …

ಹಣ ತೆಗೆದುಕೊಂಡು ಹೋದ ಸ್ನೇಹಿತೆ ಬರ ಬರುತ್ತಾ ನಯನಾಳ ಸಂಪರ್ಕದಿಂದ ದುರಾಗುತ್ತಾ … ನಯನಾಳ ಫೋನ್ ಕರೆಯನ್ನು ತೆಗೆದುಕೊಳ್ಳದೆ ಯಾಮಾರಿಸ  ತೊಡಗಿಸಿದಳು ….

ಅವಳ ಮನೆಯ ಹತ್ತಿರ ಹೋದರೆ ಮನೆ ಬೀಗವಾಕಿತ್ತು….

ಎಷ್ಟು ಸಲ ಸುತ್ತಾಡಿದರು ಮನೆಯ ಮುಚ್ಚಿದ ಬಾಗಿಲನ್ನು ನೋಡಿಕೊಂಡು ಬರುವಂತಾಯಿತು ವಿನಃ ಅವಳು ಸಿಗಲೇ ಇಲ್ಲಾ…..

ಈಶ್ವರೀಯ ಗಂಡ ಒಬ್ಬ ಗವರ್ನಮೆಂಟ್ ಕೆಲ್ಸದಲ್ಲಿದ್ದು ಗಂಡ ಹೆಂಡತಿ ಸುಮಾರು ಜನರಬಳಿ ಹಣ ಪಡೆದು ಮೋಸ ಮಾಡುತ್ತಾ ಕದ್ದು ಮುಚ್ಚಿ ಓಡಾಡುತ್ತಲಿದ್ದರೆ ಎಂಬ ವಿಷಯ ನಂತರ ತಿಳಿಯಿತು .

ಅಷ್ಟರಲ್ಲಿ ನಯನಾಳಿಗೆ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿ ಸಾಲದಲ್ಲಿ ಮುಳುಗುವಂತಾಯಿತು ….

ತನ್ನ ಕಷ್ಟದ ದಿನಗಳಿಗೂ ಅವಳು ಕೊಟ್ಟ ಹಣ ಮರಳಿಪಡೆಯಲು ಆಗಲಿಲ್ಲ ….

ಈಶ್ವರಿ ಹಾಗು ಅವಳ ಗಂಡ ತಾವು ಹಣವನ್ನೇ ತೆಗೆದುಕೊಂಡಿಲ್ಲ ಎಂದು ನಯನಾಳನ್ನು ಅವಾಚ್ಯ ಶಬ್ದಗಳಿಂದ ಬೈದು ಹಣವನ್ನು ಕೊಡುವುದಿಲ್ಲ ಏನು ಮಾಡುವೆ ನೀ ಎಂದು ಜಗಳವಾಡತೊಡಗಿದರು ….ಮೊದಲೇ ರಾಜಕೀಯದಲ್ಲಿ ಕಾರ್ಯಕರ್ತೆಯಾದ ಈಶ್ವರಿಗೆ ರಾಜಕೀಯದವರ ಬೆಂಬಲವಿದೆ ಎಂಬ ಅಹಂಕಾರ …ಅವಳ ಬಗ್ಗೆ ಒಂದು ದೂರನ್ನು ದಾಖಲು ಆಗದಂತೆ ನೋಡಿಕೊಳ್ಳುವ ಕೆಟ್ಟ ವ್ಯಕ್ತಿಗಳು ಅವಳ ನೀಚಗುಣಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದರು .

ಹಣ ಬೇಕಿದ್ದಾಗ ಕಾಲಿಡಿದು ಸಹಾಯವ ಬೇಡಿದ್ದ ಈಶ್ವರಿ , ನಯನಾಳ ಮನೆಯಲ್ಲಿ ಸಭ್ಯೆಯಂತೆ ಬಂದು ಊಟವ ಮಾಡಿ ಹಣವನ್ನು ತೆಗೆದುಕೊಂಡು ಹೋಗಿದ್ದಳು ….

ಹಣವನ್ನು ಆದಷ್ಟು ಬೇಗನೆ  ಕೊಡುವೆನೆಂದು ಹೇಳಿದ ಅವಳು … ಹಣ ಕೇಳಿದಾಗ ನಾನು ತೆಗೆದು ಕೊಂಡಿಲ್ಲವೆಂದು ಸುಮ್ಮನೆ ನನಗೆ ತೊಂದರೆ ಕೊಟ್ಟರೆ ನಾನು ಆತ್ಮಹತ್ಯೆ ಮಾಡಿಕೊಳ್ಳಿವುದಾಗಿ ಬೆದರಿಸುತಿದ್ದಳು …..

ಅನೇಕರಿಂದ ಹಣ ಪಡೆದ ಗಂಡ ಹೆಂಡತಿ ಮರ್ಯಾದೆಗೆ ಹೆದರುವ ಲಕ್ಷಣವಿಲ್ಲದೆ ಹಣ ಕೊಟ್ಟ ಜನರನ್ನೇ ನಿಂದಿಸುತ್ತಾ ತಾವು ಮಾತ್ರ ಯಾರೇ ಏನೇ ಬೈದರು ಅದು ನಮಗೆ ಕೇಳಿಸುತ್ತಿಲ್ಲ ಎಂಬಂತೆ ಇದ್ದರು ….

ದುಡ್ಡು ಕೊಟ್ಟ ನಯನಾಳಂತ ಎಷ್ಟೋ ಜನರು ತಮ್ಮ ಹಣವನ್ನು ಕಳೆದುಕೊಂಡು ಅವಳನ್ನು ಶಪಿಸುತ್ತ ಕಣ್ಣೀರಿನಲ್ಲಿ ದಿನಕಳೆಯುತಿದ್ದರು …

ದಿನರಾತ್ರಿ ಕಷ್ಟಪಟ್ಟ ಹಣವು ಇಂತ ಮೋಸದ ಜನರ ಪಾಲಾಗದಿರದಂತೆ ಎಚ್ಚರ ವಹಿಸಬೇಕು …

ನಿಮ್ಮ ಮಧ್ಯೆ ಇಂಥ ಈಶ್ವರಿಯರು ತುಂಬಾ ಜನರಿರುತ್ತಾರೆ , ನಿಮ್ಮಿಂದ  ಪಡೆದುಕೊಳ್ಳುವವರೆಗೂ ನಿಮ್ಮಲ್ಲಿ ಅವರು ತೋರುವ ಪ್ರೀತಿ ಗೌರವ ಅಪಾರ .

ನೀವ್ ಕೊಟ್ಟದ್ದನ್ನು ಕೊಡಿ ಎಂದು ಕೇಳಿದಾಗ ನಿಮಗೆ ಆ ವ್ಯಕ್ತಿಗಳ ನಿಜಬಣ್ಣ ಕಾಣಲಿಕ್ಕೆ ಸಾಧ್ಯ !!

ಎಚ್ಚರ ಮೋಸದ ಹಿತ ನುಡಿಗಿ ಮರುಳಾಗಿ ಗಳಿಸಿದ್ದನ್ನು ಕೊಟ್ಟು 

ನೊಂದುಕೊಳ್ಳುವ ಬದಲು ನಿಮ್ಮ ಕಷ್ಟದ ಫಲವನ್ನು ಭದ್ರಮಾಡಿಕೊಳ್ಲಿ…..

ಕೊಟ್ಟು ನಿಷ್ಟುರವಾಗುವ ಬದಲು ಕೊಡದಿರುವುದೇ ಮೇಲು!!


.

.

.

❤ಪ್ರೀತಿ ಇಂದ ಪ್ರೀತಿಯ ❤

❤ಹಂಚ ಬೇಕು ಮಾನವ ❤

   ನಿಮ್ಮ ಅನಿಸಿಕೆಯನ್ನು ??

ಈ ವಾಟ್ಸ್ ಆಪ್ number ಗೆ ಕಳಿಸಿ 

೯೯೪೫೬೪೫೯೮೫ (9945645985)

     ??ಧನ್ಯವಾದಗಳೊಂದಿಗೆ ??

             ? ವಾಣಿ ಶೆಟ್ಟಿ ?

Comments