UK Suddi
The news is by your side.

ವಿಮಾನ ನಿಲ್ದಾಣ ಉದ್ಘಾಟನೆಗೆ ಶಾಸಕರಿಗೆ ಆಮಂತ್ರಣವಿಲ್ಲ: ಬೆಂಬಲಿಗರ ಪ್ರತಿಭಟನೆ!

ಹುಬ್ಬಳ್ಳಿ: ಇಂದು ನಗರದಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣದ ಮೇಲ್ದರ್ಜೆಯ ಉದ್ಘಾಟನಾ ಸಮಾರಂಭಕ್ಕೆ ಸ್ಥಳಿಯ ಶಾಸಕರನ್ನು ಹಾಗೂ ಪಾಲಿಕೆ ಸದಸ್ಯರನ್ನು ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಆಮಂತ್ರಣ ನೀಡದೆ ಅವಮಾನಿಸಲಾಗಿದೆ ಹಾಗೂ ಈ ರೀತಿಯ ನಡೆಗಳಿಂದ ಬಿ.ಜೆ.ಪಿ  ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು. ಸಮಾರಂಭ ಸ್ಥಳಕ್ಕೆ ಮುತ್ತಿಗೆ ಹಾಕಲೆತ್ನಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡಬೇಕಾಯಿತು. ಈ ನಡುವೆ ಹಲವರನ್ನು ಬಂಧಿಸಿದ ಪೋಲಿಸರು ಪ್ರತಿಭಟನಾಕಾರರನ್ನು ಚದುರಿಸಿದರು.

Comments