UK Suddi
The news is by your side.

ಹುಬ್ಬಳ್ಳಿ ವಿಮಾನ ನಿಲ್ದಾಣ ಲೋಕಾರ್ಪಣೆ!

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣವನ್ನು ಅಂತರ ರಾಷ್ಟ್ರೀಯ ಮಟ್ಟದ  ವಿಮಾನ ನಿಲ್ದಾಣವನ್ನಾಗಿ ನಿರ್ಮಿಸಿದ್ದು ನೂತನ ಕಟ್ಟಡದ ಉದ್ಘಾಟನೆ ಹಾಗೂ ಹುಬ್ಬಳ್ಳಿ ಜನರ ಬಹುನಿರಿಕ್ಷಿತ ಮುಂಬಯಿಗೆ ನೇರ ವಿಮಾನ ಸೇವೆಯ ಚಾಲನೆ ಕಾರ್ಯಕ್ರಮ ಇಂದು ನಡೆಯಿತು.  
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಗೆ ಕೇಂದ್ರ ವಿಮಾನಯಾನ ಸಚಿವರಾದ ಅಶೋಕ ಗಜಪತಿ ರಾಜು,ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಂಸದರಾದ  ಜಯಂತ ಸಿನ್ಹಾ,ಅನಂತಕುಮಾರ, ಪ್ರಲ್ಹಾದ ಜೋಶಿ, ಪ್ರದೀಪ ಶೆಟ್ಟರ, ಮಹಾಪೌರರು, ಉಪಮಹಾಪೌರರು, ಜಿಲ್ಲಾ ಪಂಚಾಯತ ಅಧ್ಯಕ್ಷರು, ಮಾಜಿ ಶಾಸಕರು ಹಾಗೂ  ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

Comments