UK Suddi
The news is by your side.

41 ದಿನದಿಂದ ಊಟೋಪಚಾರ ಇಲ್ಲದೆ ಜೀವನ.


ಬಾಗಲಕೋಟ: ಶತಾಯುಷಿಯೊಬ್ಬರು ಕಳೆದ ೪೧ ದಿನದಿಂದ ನೀರು ಆಹಾರವಿಲ್ಲದೆ ಇಂದಿಗೂ ಜೀವ ಹಿಡಿದಿಟ್ಟುಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ನಿತ್ಯ ಮನೆ ಮುಂದೆ ನಿಂತು ಆಶ್ಚರ್ಯದಿಂದ ಗ್ರಾಮಸ್ಥರು ನೋಡುತ್ತಿದ್ದಾರೆ.

ಅಮೀನಗಡ ಸಮೀಪದ ಉಪನಾಳ (ಎಸ್‍ಸಿ) ಗ್ರಾಮದ ಹಿರಿಯ ಜೀವಿ ೧೦೬ ವರ್ಷದ ಪಾರ್ವತೆಮ್ಮ ಘನಮಠದಯ್ಯ ಹಿರೇಮಠ. ವಯೋ ಸಹಜ ಅಶಕ್ತಿಯಿಂದ ಬಳಲುತ್ತಿರುವ ಹಿರಿಯ ಜೀವಿ ಹಾಸಿಗೆ ಹಿಡಿದಿದ್ದು ವೈದ್ಯರಲ್ಲೂ ಪರೀಕ್ಷಿಸಿದ್ದು ಯಾವುದೇ ಅನಾರೋಗ್ಯ ಇಲ್ಲವೆಂದು ತಿಳಿಸಿದ್ದಾರೆ. ಕಳೆದ ೪೧ ದಿನದಿಂದ ನೀರು, ಆಹಾರ ವಿಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ಹಾಸಿಗೆ ಹಿಡಿದಿದ್ದಾರೆ. ೧೪ ಮಕ್ಕಳನ್ನು ಹೆತ್ತ ಈ ಅಜ್ಜಿ ತನ್ನ ಕಣ್ಣ ಮುಂದೆಯೇ ೧೦ ಮಕ್ಕಳನ್ನು ಕಳೆದುಕೊಂಡಿದ್ದಾಳೆ. ಸದ್ಯ ಮೂವರು ಗಂಡು ಹಾಗೂ ಓರ್ವ ಹೆಣ್ಣು ಮಕ್ಕಳು ಹಿರಿಯ ಜೀವಿಯಾಗಿದ್ದಾರೆ.
ಒಂದು ಗಂಟೆ ನೀರಿಲ್ಲದೆ ಮಾನವ ಇಂದಿನ ದಿನದಲ್ಲಿ ನೀರಿಗಾಗಿ ಒದ್ದಾಡುತ್ತಾನೆ. ಒಂದು ದಿನ ಉಪವಾಸ ಇರುತ್ತೇವೆ ಎಂದು ಹೇಳುವ ಅನೇಕರು ಮೇಲಿಂದ ಮೇಲೆ ಕೆಲ ದ್ರವ ಪದಾರ್ಥವನ್ನಾದರೂ ಸೇವಿಸುತ್ತಾರೆ.
ಇಂತಹುದರಲ್ಲಿ ಕಳೆದ ೪೧ ದಿನದಿಂದ ನೀರು ಆಹಾರವಿಲ್ಲದೆ ಕಣ್ಣು ಮಿಟುಕಿಸುತ್ತ ಹಾಸಿಗೆಯಲ್ಲೇ ಮಲಗಿದ್ದಾರೆ ವಯೋವೃದ್ಧೆ.
ತಾಯಿಗೆ ಯಾವುದೇ ಅನಾರೋಗ್ಯವಿಲ್ಲ. ವಯೋ ಸಹಜ ಅಶಕ್ತಿಯಿದೆ. ಇಂದಿಗೆ ೪೧ ದಿನ ಕಳೆಯಿತು ಯಾವುದೇ ಆಹಾರ ಸೇವಿಸಿಲ್ಲ.

-ಶಂಕ್ರಯ್ಯ ಹಿರೇಮಠ, ಪುತ್ರ.
ವೈಜ್ಞಾನಿಕವಾಗಿ ನಂಬಲು ಅಸಾಧ್ಯ. ಆದರೂ ನೀರು ಆಹಾರ ವಿಲ್ಲದೆ ಜೀವಿಸುತ್ತಿರುವುದು ವಿಸ್ಮಯ. ಚಟುವಟಿಕೆ ಇಲ್ಲದೆ ಮಲಗಿದ್ದ ಸ್ಥಿತಿಯಲ್ಲೇ ಇರುವುದರಿಂದ ಸಹಜ ಪ್ರಕ್ರಿಯೆ. ದೇಹದಲ್ಲಿನ ಫ್ಯಾಟ್ ಜೀವಿಸುವಂತೆ ಮಾಡುತ್ತದೆ.

-ಎ.ಎನ್.ದೇಸಾಯಿ ಡಿಎಚ್‍ಒ ಬಾಗಲಕೋಟ

ಕೃಪೆ:ವಿಜಯ ಕರ್ನಾಟಕ

Comments