UK Suddi
The news is by your side.

ತಂದೆಗೆ ಗಿಫ್ಟ್ ನೀಡಿದ ನಟ ನಿಖಿಲ್ ಕುಮಾರ.

ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ” ಚಿತ್ರವು ಸಖತ್ ಸೌಂಡ್  ಮಾಡುತ್ತಿದ್ದು, ಡಿಸೆಂಬರ್ 16ರಕ್ಕೆ  ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಲಿದೆ.ಈ ಟೀಸರ್ ವಿಶೇಷವೆಂದರೆ, ಈ ಬಾರಿ ಅಭಿಮನ್ಯು ನನ್ನು ಪರಿಚಯಿಸುವಂತಹ ಟೀಸರ್ ಇದಾಗಿದೆ.
  

ಕುರುಕ್ಷೇತ್ರ ಚಿತ್ರದಲ್ಲಿ ನಟ ನಿಖಿಲ್ ಕುಮಾರ್ “ಅಭಿಮನ್ಯು” ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸುಮಾರು 70 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.ಡಿಸೆಂಬರ್ 16 ರಂದು ನಿಖಿಲ್ ತಂದೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬ ಇರುವುದರಿಂದ ಅಂದೇ ನಿಖಿಲ್ ಅವರ ಟೀಸರ್ ಬಿಡುಗಡೆಯಾಗುತ್ತದೆ. ಈ ಮೂಲಕ ತಮ್ಮ ತಂದೆಗೆ ನಟ ನಿಖಿಲ್ ಕುಮಾರ ಹುಟ್ಟು ಹಬ್ಬದ  ಗಿಫ್ಟ್ ಕೊಡಲು ಹೊರಟಿದ್ದಾರೆ.

Comments