UK Suddi
The news is by your side.

ರೈತರ ಬೆಂಬಲವಿಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ:ವೆಂಕಪ್ಪ ಹುಜರತ್ತೀ.


ನರಗುಂದ: ‘ಮಹದಾಯಿ ಉತ್ತರ ಕರ್ನಾಟಕದ ರೈತರ ಬಹು ನಿರೀಕ್ಷೆಯ ಯೋಜನೆ. ಈ ವಿವಾದ ಇತ್ಯರ್ಥಪಡಿಸಲು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ರೈತರ ಹಿತ ಕಾಯಬೇಕು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯೆ ದೇವಕ್ಕ ತಾಳಿ ಆಗ್ರಹಿಸಿದರು
ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 881ನೇ ದಿನ ಬುಧವಾರ ಅವರು ಮಾತನಾಡಿದರು
‘ರಾಜಕಾರಣಿಗಳು ತಾವು ಆಡಿದ್ದೇ ಆಟ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಸಲ್ಲದು. ಚುನಾವಣೆ ಹತ್ತಿರ ಬರುತ್ತಿದೆ. ರೈತರು ಜಾಗೃತರಾಗಿದ್ದು, ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜಕೀಯ ದೊಂಬರಾಟ ಬಹುಕಾಲ ನಡೆಯದು. ಈ ಭಾಗದ ರೈತರ ಬದುಕಿನ ಹೋರಾಟಕ್ಕೆ ಮಾನ್ಯತೆ ನೀಡಬೇಕು’ ಎಂದರು
‘ರೈತರ ಬೆಂಬಲ ಇಲ್ಲದೇ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಇದನ್ನು ಅರಿಯಬೇಕು. ಈ ಭಾಗದ ಶಾಸಕರು, ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರಬೇಕು. ರೈತರ ಬದುಕು ದುಸ್ತರವಾಗಿದೆ. ಪೈರುಗಳು ಒಣಗಿ, ಬದುಕಿಗೆ ಆಸರೆ ಇಲ್ಲದಂತಾಗಿದೆ. ಪುಡಿಗಾಸಿನ ಪರಿಹಾರ ಬೇಕಿಲ್ಲ. ನಮಗೆ ಮಹದಾಯಿ ನೀರು ಬೇಕು, ಮಲಪ್ರಭಾ ಒಡಲು ತುಂಬಬೇಕು’ ಎಂದು ಹೋರಾಟ ಸಮಿತಿಯ ವೆಂಕಪ್ಪ ಹುಜರತ್ತಿ ಒತ್ತಾಯಿಸಿದರು
ಧರಣಿಯಲ್ಲಿ ಚನ್ನಬಸವ್ವ ಆಯಟ್ಟಿ, ರತ್ನವ್ವ ಸವಳಬಾವಿ, ಅನಸವ್ವ ಶಿಂಧೆ, ಹನಮಂತ ಸರನಾಯ್ಕರ, ವೀರಣ್ಣ ಸೊಪ್ಪಿನ ಎಸ್‌.ಬಿ.ಜೋಗಣ್ಣವರ, ವಾಸು ಚವ್ಹಾಣ, ಶ್ರೀಶೈಲ ಮೇಟಿ, ಎಸ್.ಕೆ.ಗಿರಿಯಣ್ಣವರ, ಕೆ.ಎಚ್.ಮೊರಬದ, ಎಲ್.ಬಿ. ಮುನೇನಕೊಪ್ಪ ಇದ್ದರು
ಪ್ರಕಟಣೆ : http://m.prajavani.net

Comments