UK Suddi
The news is by your side.

ರೋಮ್ನಲ್ಲಿ ಹನಿಮೂನ್ ಮುಂಬೈನಲ್ಲಿ ಸಂಸಾರ.

ಇತ್ತೀಚೆಗೆ ಇಟಲಿಯ ಟುಸ್ಕನಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹನಿಮೂನ್ ಗಾಗಿ ಇಟಲಿಯ ರಾಜಧಾನಿ ರೋಮ್ ಗೆ ತೆರಳಿದ್ದಾರೆ. ಮಂಗಳವಾರದಂದು ಅವರು ರೋಮ್ ಗೆ  ಪ್ರಯಾಣಿಸಿದ್ದು ಒಂದು ವಾರ ಅಲ್ಲಿ ವಿಹರಿಸಲಿದ್ದಾರೆ.
ನಂತರ ಡಿಸೆಂಬರ್ 21ರಂದು ನವದೆಹಲಿಯಲ್ಲಿ ನಡೆಯಲಿರುವ ಆರತಕ್ಷತೆಗೂ ಮುನ್ನವೇ ಭಾರತಕ್ಕೆ ಮರಳಲಿದ್ದು ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಜೊತೆಗೂಡಿ ತೆರಳಲಿದ್ದಾರೆ. ಹೊಸ ವಷ೯ವನ್ನು ಅಲ್ಲೇ ಆಚರಿಸಲಿದ್ದಾರೆ. 

    

ಮುಂಬೈ ಅಪಾಟ೯ಮೆಂಟನಲ್ಲಿ ಸಂಸಾರ 

ವಿರಾಟ್ ಅನುಷ್ಕಾ ಮುಂಬೈನ ವರ್ಲಿ ಅಪಾರ್ಟ್ಮೆಂಟ್ನಲ್ಲಿ ಸಂಸಾರ ಮಾಡಲಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿಯವರು ದೆಹಲಿಯಿಂದ ಮುಂಬೈಗೆ ತಮ್ಮ ವಾಸವನ್ನು ಬದಲಾಯಿಸಿಕೊಳ್ಳಲಿದ್ದಾರೆ. 2018ರಲ್ಲಷ್ಟೆ ವಿರುಷ್ಕಾ ವಾಸಕ್ಕೆ ಈ ಮನೆ ಸಜ್ಜಾಗಲಿದೆ. ಕೊಹ್ಲಿ 2016ರಲ್ಲಿ ಓಂಕಾರ 1973 ಟವರ್ಸ್ ಈ ಐಷಾರಾಮಿ ಮನೆಯನ್ನು 34 ಕೋಟಿ ರೂ ಗೆ ಖರೀದಿಸಿದ್ದರು. ತ್ರಿವಳಿ ಟವರ್ ಕಾಂಪ್ಲೆಕ್ಸ್ ನಲ್ಲಿ ವಿರಾಟ ಸಿ ಟವರ್ ನಲ್ಲಿ ಮನೆ ಹೊಂದಿದ್ದರು.

Comments