UK Suddi
The news is by your side.

ಮಹಾಲಿಂಗಪುರ ನಗರವನ್ನು ತಾಲೂಕು ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ.

ಬಾಗಲಕೋಟ:ಮಹಾಲಿಂಗಪುರ ನಗರವನ್ನು ತಾಲೂಕು ಮಾಡುವಂತೆ  ಆಗ್ರಹಿಸಿ ಮಹಾಲಿಂಗಪುರ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಬಸವೇಶ್ವರ ವೃತ್ತದಿಂದ ಕಿತ್ತೂರ ಚೆನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಾಂಕೇತಿಕವಾಗಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು “ಎಲ್ಲಿಯ ವರೆಗೆ ಹೋರಾಟ,ತಾಲೂಕು ಆಗುವ ವರೆಗೆ ಹೋರಾಟ. ಬೇಕೇ ಬೇಕು ತಾಲೂಕು ಬೇಕು” ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಹೋರಾಟ ಸಮಿತಿ ಸದಸ್ಯರಾದ ದೇವೇಂದ್ರ ಬಿಜವಾಲ್ ಸರ್ ಮಾತನಾಡಿ ” ಕಳೆದ ಮೂವತ್ತು ವರ್ಷಗಳಿಂದ ಮಹಾಲಿಂಗಪುರ ನಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಎಂದು ಹೋರಾಟ ಮಾಡುತ್ತಾ ಬಂದಿದ್ದೇವೆ.

ಇದೊಂದು ಪಕ್ಷಾತೀತ ಹೋರಾಟವಾಗಿದ್ದು ಎಲ್ಲರೂ ಪಕ್ಷ ಭೇದ ಮರೆತು ಹೋರಾಟ ಮಾಡಿದಲ್ಲಿ ತಾಲೂಕು ಘೋಷಣೆ ಆಗುವದರಲ್ಲಿ ಯಾವುದೇ ಸಂಶಯವಿಲ್ಲ. ಮಹಾಲಿಂಗಪುರ ನಗರವು ಆರು ತಾಲೂಕುಗಳ ಮದ್ಯವಿದ್ದು ಇದೊಂದು ವಾಣಿಜ್ಯ ಕೇಂದ್ರವಾಗಿದೆ.ಸರಕಾರ ಆದಷ್ಟು ಬೇಗನೆ ನಮ್ಮ ಮನವಿಗೆ ಸ್ಪಂದಿಸಿ ಮಹಾಲಿಂಗಪುರ ನಗರವನ್ನು ತಾಲೂಕು ಎಂದು ಘೋಷಣೆ ಮಾಡಿದಲ್ಲಿ ರೈತರಿಗೆ,ನೇಕಾರರಿಗೆ,ವ್ಯಾಪಾರಸ್ಥರಿಗೆ,ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ” ಎಂದರು.

ಈ ಪ್ರತಿಭಟನೆಯಲ್ಲಿ ವಿವಿದ ಸಂಘಟನೆಗಳು,ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು,ರೈತರು,ನಾಗರಿಕರು ಪಾಲ್ಗೊಂಡಿದ್ದರು.

Comments