ನಿರೋಧ್ ಜಾಹೀರಾತಿಗೆ ವಿರೋಧ್
ಟಿವಿ ವಾಹಿನಿಗಳಲ್ಲಿ ನಿರೋಧ್ ಜಾಹೀರಾತು ಪ್ರದರ್ಶನವನ್ನ ರದ್ದು ಗೊಳಿಸಿದ ಕೇಂದ್ರ ಸರ್ಕಾರ ನಿರ್ಧಾರವನ್ನ ರಾಜಸ್ತಾನ ಹೈಕೋರ್ಟ್ ಟೀಕಿಸಿದೆ. ಅಶ್ಲೀಲತೆಯಿಂದ ಕೂಡಿರುವ ನಿರೋದ್ ಜಾಹೀರಾತುಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಪ್ರದರ್ಶನ ಮಾಡದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಆದೇಶಿಸಿತ್ತು.
ಈ ಆದೇಶಕ್ಕೆ ಕೆಲ ನಿರೋದ್ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ವು. ಈ ಕ್ರಮವನ್ನ ಪ್ರಶ್ನಿಸಿ, ರಾಜಸ್ತಾನ ಹೈಕೋರ್ಟ್ ಮೆಟ್ಟಿಲೇರಿದ್ದವು. ರಾಜಸ್ತಾನ ಹೈಕೋರ್ಟ್ನ ವಿಭಾಗೀಯ ಪೀಠ, ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ನೋಟಿಸ್ ನೀಡಿದ್ದು, ಈ ಕ್ರಮ ಅರ್ಥವಿಲ್ಲದ್ದು ವೆಂದು ಟೀಕಿಸಿದೆ.