ಮಹಾದಾಯಿ ವಿಚಾರ: ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿಯಲ್ಲಿ ಗುಡ್ ನ್ಯೂಸ್ ಸಾಧ್ಯತೆ!
ನಿನ್ನೆಯ ದಿವಸ ಕೇಂದ್ರ ಸಚಿವರುಗಳಾದ ಅನಂತಕುಮಾರ, ಪಿಯೂಶಗೋಯಲ್,ಪ್ರಕಾಶ ಜಾವಡೇಕರ ಹಾಗೂ ಮುರಳೀಧರ ರಾವ ಅವರುಗಳ ಉಪಸ್ಥಿತಿಯಲ್ಲಿ ರಾಜ್ಯದ ನಾಯಕರುಗಳಾದ ಜಗದೀಶ ಶೆಟ್ಟರ,ಸುರೇಶ ಅಂಗಡಿ, ಪ್ರಲ್ಹಾದಜೋಶಿ, ಬಸವರಾಜಬೊಮ್ಮಾಯಿಯವರೊಂದಿಗೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಗೋವಾ ಮುಖ್ಯಮಂತ್ರಿಗಳಾದ ಮನೋಹರ ಪರಿಕ್ಕರ ಅವರೊಂದಿಗೆ ಮಹಾದಾಯಿ ನದಿ ನೀರಿನ ಸಮಸ್ಯೆ ಬಗ್ಗೆ ಮಹತ್ವದ ಸಭೆ ನಡೆಯಿತು.
ಪರಿಕ್ಕರ ಅವರಿಗೆ ರಾಜ್ಯದ ಉತ್ತರಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ತೀವ್ರತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು. ಜನರ ಕುಡಿಯುವ ನೀರನ ಸಮಸ್ಯೆ ಹಿನ್ನೆಲೆಯಲ್ಲಿ ನ್ಯಾಯಾಧೀಕರಣದ ಹೊರಗೆ ಸೌಹಾರ್ದಯುತವಾಗಿ ಕುಡಿಯುವ ನೀರಿಗೆ ಅವಶ್ಯವಿರುವ ಮಹಾದಾಯಿಯ 7.56 ಟಿ.ಎಂ.ಸಿ. ನೀರನ್ನು ರಾಜ್ಯಕ್ಕೆ ಬಿಡುವ ಕ್ರಮಕ್ಕಾಗಿ ಕೋರಲಾಯಿತು.
ಸಮಸ್ಯೆ ಬಗ್ಗೆ ಶಾಂತ ರೀತಿಯಿಂದ ಆಲಿಸಿದ ಮನೋಹರ ಪರಿಕ್ಕರ ಅವರು ಈ ಬಗ್ಗೆ ತಮ್ಮ ನಿರ್ಧಾರವನ್ನು ಇಂದು ತಿಳಿಸುವುದಾಗಿ ಸಭೆಗೆ ತಿಳಿಸಿದರು ಎನ್ನಲಾಗಿದೆ.