UK Suddi
The news is by your side.

ವಿಜಯಪುರದಲ್ಲಿ ಶಾಲಾ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ.

ಬಾಗಲಕೋಟ: ವಿಜಯಪುರದಲ್ಲಿ ದಲಿತ ಬಾಲಕಿ ದಾನಮ್ಮಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಲೆಗೈದಿರುವುದನ್ನು ವಿರೋಧಿಸಿ ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ತು ರಬಕವಿ-ಬನಹಟ್ಟಿ ಘಟಕದಿಂದ  ಪ್ರತಿಭಟನೆ ನಡೆಸಲಾಯಿತು. ತಪ್ಪಿತಸ್ಥರನ್ನು ಕೂಡಲೆ ಬಂಧಿಸಿ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದವು.

ಈ ಸಂದರ್ಭದಲ್ಲಿ ವೀರಭದ್ರಶಾಸ್ತ್ರಿ ಹಿರೇಮಠ್,ಮಂಜುನಾಥ್ ಹಾವೀನಾಳ,ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ ಸರ್ವ್ ಸದಸ್ಯರು ಸೇರಿದಂತೆ ಅನೇಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments