UK Suddi
The news is by your side.

ಹುಬ್ಬಳ್ಳಿಯಲ್ಲಿ ಪರಿವರ್ತನೆಯ ಮಹಾ ಸಮಾವೇಶ.

ಹುಬ್ಬಳ್ಳಿ:ವಿಕಾಸದ ಸ್ವಾಗತಕ್ಕೆ ಸಜ್ಜಾದ ವಾಣಿಜ್ಯ ನಗರದಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಹುಬ್ಬಳ್ಳಿಯಲ್ಲಿ ಮೆಗಾ ಸಮಾವೇಶ ನಡೆಸಿದರು. 

ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರ ಹರ್ಷೋದ್ಘಾರಗಳು ಮುಗಿಲು ಮುಟ್ತುವಂತಿತ್ತು. 

ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಬಹುನಿರೀಕ್ಷಿತ ಮಹದಾಯಿ ನದಿ ನೀರು ಸಮಸ್ಯೆಗೆ ಶೀಘ್ರವೇ ಪರಿಹಾರ ದೊರೆಯಲಿದೆ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೊಂದಿಗೆ ಮಾತುಕತೆ ನಡೆಸಿ ಪತ್ರ ಬರೆದಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತ ನಿರ್ಧಾರ ಶೀಘ್ರವೆ ಹೊರಬರಲಿದೆ ಎಂದು ಘೋಷಿಸಿದರು. 

ಸಮಾವೇಶದಲ್ಲಿ ಮುರಳೀಧರ್ ರಾವ್, ಜಗದೀಶ್ ಶೆಟ್ಟರ್,ಕೆ ಎಸ್ ಈಶ್ವರಪ್ಪ ಪ್ರಹ್ಲಾದ್ ಜೋಶಿ,ಆರ್ ಅಶೋಕ್,ಗೋವಿಂದ್ ಕಾರಜೋಳ,ಸಿಟಿ ರವಿ, ಬಸವರಾಜ್ ಬೊಮ್ಮಾಯಿ,ಎನ್. ರವಿಕುಮಾರ್, ಶಿವಕುಮಾರ್ ಉದಾಸಿ ಮುಂತಾದವರು ಭಾಗವಹಿಸಿದ್ದರು.

Comments