UK Suddi
The news is by your side.

ದೊಡವಾಡ ಗ್ರಾಮದ ಹುಣಸಿಮರದ ದಾರಿಗೆ ಚಾಲನೆ.

ಬೈಲಹೊಂಗಲ:ತಾಲೂಕಿನ ದೊಡವಾಡ ಗ್ರಾಮದ ದಿಡ್ಡಿ ಅಗಸಿಯಿಂದ ಸಾಗುವ ಹುಣಸಿಮರದ ದಾರಿಯನ್ನು ಜಿಲ್ಲಾ ಪಂಚಾಯತಿ ಸದಸ್ಯ ಶಂಕರ ಮಾಡಲಗಿ ಗುದ್ದಲಿ ಪೂಜೆ ಮಾಡುವುದರ ಮೂಲಕ ನೆರವೇರಿಸಿದರು.

ಮುಖ್ಯಮಂತ್ರಿಯ ಲಮ್ಸಮ್ ಗ್ರ್ಯಾಂಟ ಯೋಜನೆ ಅಡಿಯಲ್ಲಿ 35 ಲಕ್ಷ ರೂಪಾಯಿ ಮತ್ತು ನೀರಾವರಿ ಯೋಜನೆ ಅಡಿಯಲ್ಲಿ 30 ಲಕ್ಷ ರೂಪಾಯಿಗಳನ್ನು ಮುಂಜುರು ಮಾಡಿಸುವಲ್ಲಿ ಗ್ರಾಮದ ರೈತ ಪ್ರೀತಿಗೆ ಶಂಕರ ಮಾಡಲಗಿಯವರು ಪಾತ್ರರಾಗಿದ್ದಾರೆ. 

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಲದ ದಾರಿ ಮಳೆಗಾಲದಲ್ಲಂತೂ ರೈತರಿಗೆ  ಹೊಲಗಳಿಗೆ ಹೋಗಲಿಕ್ಕೆ ಬಹಳಷ್ಟು ತೋಂದರೆಯಾಗುತ್ತಿತ್ತು ಇದನ್ನು ಗಮನಿಸಿ ಸತತ ಹೋರಾಟದ ಪ್ರಯತ್ನದಿಂದ ಕಾಮಗಾರಿಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ತಾ ಪಂ ಸದಸ್ಯ ಸಂಗಯ್ಯ ದಾಬಿಮಠ,ಗ್ರಾಪಂ ಸದಸ್ಯ ಗುರುಶಿದ್ದಯ್ಯ ಉಜ್ಜನಿಮಠ, ಮಹದೇವಪ್ಪ ಹತ್ತಿಕಟಗಿ ಸೇರಿದಂತೆ ಗ್ರಾಮದ ಅನೇಕ ಜನ ರೈತರು ಉಪಸ್ಥಿತರಿದ್ದರು.

Comments