SCH ಪ್ರತಿಷ್ಠಾನದಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಚರ್ಚಾ ಸ್ಪರ್ಧೆ
ಬೈಲಹೊಂಗಲ: ಇತ್ತೀಚಿಗೆ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದ SCH ಪ್ರತಿಷ್ಠಾನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳು “ವಿಜ್ಞಾನದ ಸಾಧಕ ಮತ್ತು ಬಾಧಕ” ವಿಷಯದ ಮೇಲೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಪ್ರಥಮ ಬಹುಮಾನವನ್ನು ಕುಮಾರಿ. ಲಕ್ಷ್ಮಿ ಯ. ಹುಣಶೀಕಟ್ಟಿ ಹಾಗೂ ದ್ವಿತೀಯ ಬಹುಮಾನವನ್ನು ಕುಮಾರ. ಚೇತನ ಚಂ. ಚಿವಟಗುಂಡಿ ಮತ್ತು ಕುಮಾರಿ. ವೀಣಾ ಜ. ಅಣಿಕಿವಿ ಅವರು ಪಡೆದರು. ತೃತೀಯ ಬಹುಮಾನವನ್ನು ಕುಮಾರಿ. ಅನಿತಾ ಮ್ಯಾಟೊಳ್ಳಿ ಪಡೆದರು.
SCH ಪ್ರತಿಷ್ಠಾನದ ಕಂಪ್ಯೂಟರ್ ಶಿಕ್ಷಕರಾದ ಶ್ರೀ. ಮಕ್ತುಮ್ ತಹಸೀಲ್ದಾರ ಮತ್ತು ಕುಮಾರಿ. ಸಂಗಮ್ಮ ಹಟ್ಟಿಹೊಳಿ ಅವರು ಸ್ಪರ್ಧೆಯನ್ನು ಏರ್ಪಡಿಸಿದ್ದರು.