ನಾನು ದಾನಮ್ಮಾ
ನಾನು ದಾನಮ್ಮಾ
ಶೀಲ ಕಳೆದುಕೊಂಡವಳು…
ಪ್ರಾಣದ ಜೊತೆ
ಕನಸು ಕಳೆದುಕೊಂಡವಳು…
ಉಜ್ವಲ ಕನಸು ಹೊತ್ತು…
ಹೊರಟವಳ
ಶಾಲೆಯ ಹಾದಿಯಲ್ಲಿ…
ಬಿದ್ದಿದ್ದವು ಕಾಮದ
ಮುಳ್ಳುಗಳು
ಕೈ ಮುಗಿದು
ಕಾಲು ಮುಗಿದು
ಬೇಡಾ ಕಾಕಾ…
ಬೇಡಾ ಅಣ್ಣಾ…
ಎಂದು ಅಂಗಲಾಚಿದರೂ…
ಕೇಳಿಸಿಕೊಳ್ಳದ
ರಣ ಹದ್ದುಗಳು
ಹಿರಿದು ತಿಂದವು
ನನ್ನ ಎಳೆ ಮೈಯನ್ನಾ…
ಬಾಬಾ ಸಾಹೇಬರ ವಿಮೋಚನಾ
ರಥವನ್ನು
ಎಳೆಯ ಬೇಕಿದ್ದವಳ
ಕೈ ಕತ್ತರಿಸಿದರು
ಪಾಪೀ ಕಾಮುಕರು
ಜೈ ಭಾರತ ಮಾತೆ…
ಜೈ ಕರ್ನಾಟಕ ಮಾತೆ…
ಎಂದು ಸಲಾಮ್ ಹೊಡೆಯುವ
ನಿಮ್ಮ ಕೈಗಳು,
ನನ್ನ ಬಟ್ಟೆ ಬಿಚ್ಚುವಾಗ…
ನೆನಪಾಗಲಿಲ್ಲವೆ
ಭಾರತ ಮಾತೆ ಕರ್ಣಾಟಕ ಮಾತೆ?
– ಮಹಾಂತೇಶ ಹೊದ್ಲೂರ್