UK Suddi
The news is by your side.

ಬಣ್ಣಗಳೇ ಸಾರುತಿವೆ…

ಬಣ್ಣಗಳೇ ಸಾರುತಿವೆ…
ಬಣ್ಣಗಳೇ ಸಾರುತಿವೆ ನೂರಾರು ಕಥೆಯ…
ಕಣ್ಣಿಲ್ಲದವನಿಗೆ ಬೇಕಿರುವಂತೆ ಬೆಳಕು,
ಕಣ್ಣಿರುವವನಿಗೆ ಬೇಕಂತೆ ಬಣ್ಣಗಳು.
ಬಣ್ಣಗಳ ನೆಲೆಗಟ್ಟು ಮನಸಿನಾಲೋಚನೆ
ಮೂಡುತಲಿದೆ ಕುಂಚದಲಿ ನೂರಾರು ತರದಿ
ತದ್ವಿರುದ್ಧ ಭಾವಗಳು ಒಂದಾಗುತಲಿವೆ ಈಗ…
ಮಾಯಗಾರನ ಮಾಯಾವಿ ಕುಂಚದಲಿ,
ತಳುಕು-ಬಳುಕಿನ ನೂರಾರು ಕಥೆಗಳಿವೆಯಿಲ್ಲಿ.
ಕ್ರೌರ್ಯಕ್ಕೂ,ಶಾಂತಿಗೂ ಬಣ್ಣ ಬೆಸೆದಿದೆ ಬಂಧ.
ಬಂಧಿಯಾಗಿವೆ ಎಲ್ಲವೂ ಈ ಚೌಕಟ್ಟಿನೊಳಗೆ
ಜಾತಿ-ಬಣಗಳ ಮೀರಿವೆ ಈ ಬಣ್ಣಗಳು
ಒಂದಾಗಿ ಬೆರೆತಿವೆ ತಮ್ಮತನದೊಂದಿಗೆ
ನಾನು ಮೇಲು, ನೀನು ಕೀಳೆಂಬುದು ಇಲ್ಲಿಲ್ಲ
ಮೇಳೈಸಿವೆ ಎಲ್ಲ ಒಂದೇ ಜೀವದಂತೆ
ಸಾರುತಿವೆ ಎಲ್ಲರಿಗೂ ಸಮಾನತೆಯ ನೀತಿಪಾಠವನು.
ನಮ್ಮಂತೆ ಒಂದಾಗಿ ಬಾಳಿರೆಂದು,
ಬಣ್ಣಗಳೇ ಸಾರುತಿವೆ ನೂರಾರು ಕಥೆಯ…
                                                            -vಭಾ

Comments