ಸ್ವಾಗತಿಸಿ ನೋವನ್ನು ತೊರೆದು ನಲಿವಿನ ಆಶಾಕಿರಣ
ಹೊಸ ವರುಷದ ಆಗಮನ
ನಿಮ್ಮ ಮನದಲ್ಲಿ ತರಲಿ
ಹರುಷದ ಹೂಬನ
ತೊಳೆಯಲಿ ಎಲ್ಲಾ ನೋವಿನ ನೆನಪನ್ನ !
ಕಳೆಯಲಿ ನಿಮ್ಮ ಎಲ್ಲಾ ತಪ್ಪನ್ನ !
ಸುತ್ತಮುತ್ತಲು ಸುತ್ತಾಡಲಿ
ಪ್ರೀತಿಯ ಸವಿ ಬಂಧನ !
ನಿಮ್ಮ ನಡೆಯುವ ದಾರಿಯಲಿ
ಕಾಮನಬಿಲ್ಲಿನ ತೋರಣ
ಸ್ವಾಗತಿಸಿ ಅನುದಿನ!
ನಕ್ಷತ್ರದಂತೆ ಹೊಳೆಯುವ
ಮಣಿಯಂತಾಗಲಿ ನಿಮ್ಮ
ಹೆಸರಿನ ಕೀರ್ತನ …!
ತಪ್ಪುಮಾಡಿದವರನ್ನ ಕ್ಷಮಿಸಿ ಬಿಡಿ ಈ ದಿನ ….!
ನಿಮ್ಮ ಮನದ ಶಾಂತಿಗಾಗಿ
ನಿಮ್ಮ ನಗುವಿನ ಮೊಗದ ಸಿರಿಯ ಉಳಿಸಿಕೊಳ್ಳಲು
ನಿಮ್ಮ ಮಾನವ ಅಣಿಮಾಡಿ ಸಿಂಗರಿಸಿ ….
ಪ್ರೀತಿ ಕರುಣೆ ವಾತ್ಸಲ್ಯ ಎಂಬ ಒಡವೆ ಇಂದ ಈ ದಿನ…
ನಿಮ್ಮ ಪ್ರೀತಿ ತುಂಬಿದ ಹೃದಯಕ್ಕಿಂತ ಸಿರಿವಂತ ಯಾರಿಲ್ಲಾ….
ಯಾರು ಪ್ರೀತಿ ಕೊಡರೆಂದು ಕೊರಗದೆ
ಸಹಾಯಕ್ಕಾಗಿ ಯಾರನ್ನು ಬೇಡದೆ…
ನಂಬಿ ನಡೆ ನಿನ್ನ ಹೃದಯವ
ನಿನ್ನ ಹೃದಯಕ್ಕಿಂತ ಬಂಧು ಬೇಕಿಲ್ಲಾ….
ಬಾಳು ನಿನಗಾಗಿ ನಿನ್ನ ಮನಸಿನ ನೆಮ್ಮದಿಗಾಗಿ …ನಿನ್ನ ಮೊಗದ ಸಿರಿ ಸುಂದರ ನಗುವಿಗಾಗಿ !!
ವರುಷ ಕಳೆದು ಹೊಸವರುಷದ ಆಗಮನ….
ಸ್ವಾಗತಿಸಿ ನೋವನ್ನು ತೊರೆದು ನಲಿವಿನ ಆಶಾಕಿರಣ.
.
.
❤ಪ್ರೀತಿ ಇಂದ ಪ್ರೀತಿಯ ❤
❤ಹಂಚ ಬೇಕು ಮಾನವ ❤
ನಿಮ್ಮ ಅನಿಸಿಕೆಯನ್ನು 👇🏻
ಈ ವಾಟ್ಸ್ ಆಪ್ number ಗೆ ಕಳಿಸಿ
೯೯೪೫೬೪೫೯೮೫ (9945645985)
🙏🏻ಧನ್ಯವಾದಗಳೊಂದಿಗೆ 🙏🏻
😍 ವಾಣಿ ಶೆಟ್ಟಿ 😍