ನೀನೇ ಪುಣ್ಯವಂತ
ಒಣಗಿದ ಮರದಲ್ಲಿ ಚಿಗುರುವ ಆಸೆಯ ಕೊಡುವ ….
ಸೂರ್ಯ ಎಳೆ ಕಿರಣದ ಸ್ಪರ್ಶವಿದ್ದಂತೆ !ಪ್ರಿತಿತುಂಬಿದ ಮಾತೃ ಹೃದಯ ನಿನ್ನ ಹೆತ್ತ ತಾಯಿ …!
ಕೆಲವೊಮ್ಮೆ ಸುಡುಬಿಸಿಲಂತೆ ಕಂಡರೂ ….ನಿನ್ನ ಬೆಳವಣಿಗೆಯ ಹಾದಿಯಲ್ಲಿ ಬೆಳಕನು ಚಲ್ಲಿ …..ನಿನ್ನ ತಪ್ಪುಗಳಿಗೆ ಬಿಸಿಯಾದ ಕಿರಣಗಳಿಂದ ತಿದ್ದಿ ತೀಡಿ … ಬಿಡದೆ ಕಾಪಾಡುವ ಬೆಳ್ಳಿಯ ಬೆಳಕಲ್ಲಿ ….ಕಲ್ಲುಮುಳ್ಳಿನದಾರಿಯ ತೋರಿ …..ಸರಿಮಾರ್ಗವ ತೋರುವ ಪ್ರೀತಿಯ ಬೆಳಕಿದು ….!!
ಸಂಗಾತಿಯಂತೆ ಮುಸಂಜೆಯ ತಂಗಾಳಿಬೆರೆತ …..
ಪೂರ್ಣಚಂದಿರನ ರೂಪದಿ !!ನಕ್ಷತ್ರಗಳಿಂದ ಮನೆಯನ್ನು ಸಿಂಗರಿಸಿ …..!ಪ್ರೇಮದಿಂದ ನಿನ್ನ ನಗುನಗುತ್ತಾ ಸ್ವಾಗತಿಸಿ !!ದುಡಿದು ದಣಿದು ಬಂದ ಮನಕೆ ಅಪ್ಪುಗೆಯ ಮುದನೀಡುತ…!!ಮಡಿಲಲಿ ಮಗುವಿನಂತೆ ನಿನ್ನ ಮಲಗಿಸಿ ,ಆರೈಸುವ ಪ್ರೀತಿಯ ಹೃದಯಕೆ ಸಾಟಿ ಯಾರು??!!??
ಸೂರ್ಯನಂತ ತಾಯಿ !!
ಚಂದ್ರನಂತ ಹೆಂಡತಿ!!
ಪಡೆದ ನೀ ಎಷ್ಟು ಜನುಮದ ಅದೃಷ್ಟವ ಹೊತ್ತುತಂದ ಪುಣ್ಯ!!
ಹತ್ತಿರವಿರುವಾಗ ಅದನ್ನು ಕಾಪಾಡಿಕೊಂಡರೆ ಚೆನ್ನಾ…. !!
ಕಳೆದುಕೊಂಡಮೇಲೆ ಪಶ್ಚತ್ತಾಪ ಪಟ್ಟರೆ ಪ್ರಯೋಜನವಿಲ್ಲವಣ್ಣ!!
.
.
(ಬರವಣಿಗೆ )
ಇವಾ ಲೇಖಾ
ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ 🙏🏻
ivaalekha7717@gmail.com
ವಾಟ್ಸ್ ಆಪ್ No: 9741329365