UK Suddi
The news is by your side.

ಕುಸ್ತಿಪಟು ಜತೆ ಘರ್ಷಣೆ: ಸುಶೀಲ್ ಕುಮಾರ್ ವಿರುದ್ಧ FIR

ದೆಹಲಿ: ಪ್ರತಿಸ್ಪರ್ಧಿ ಕುಸ್ತಿಪಟು ಜತೆ ಘರ್ಷಣೆಗಿಳಿದಿದ್ದಕ್ಕಾಗಿ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಾಗಿದೆ. ಸುಶೀಲ್ ಹಾಗೂ ಪ್ರವೀಣ್ ರಾಣಾ ಅವರ ಬೆಂಬಲಿಗರ ನಡುವೆ ಶುಕ್ರವಾರ ನಡೆದಿದ್ದು, ಅದಕ್ಕೆ ಸುಶೀಲ್ ಕಾರಣ ಎಂದು ದೆಹಲಿ ಪೊಲೀಸ್ ಆಯುಕ್ತ ಎಂ.ಎಸ್. ರಾಂಧವಾ ತಿಳಿಸಿದ್ದಾರೆ.

2018ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಶುಕ್ರವಾರ ಅರ್ಹತಾ ಪಂದ್ಯ ನಡೆದ ವೇಳೆ ಪಂದ್ಯದಲ್ಲಿ ಪ್ರವೀಣ್ ಅವರನ್ನು ಎದುರಿಸಿದ ಸುಶೀಲ್ ಗೆಲುವು ಸಾಧಿಸಿ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ್ದರು. ಬಳಿಕ ಸುಶೀಲ್ ಹಾಗೂ ಪ್ರವೀಣ್ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಗೆ ಸುಶೀಲ್ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Comments