ಹೊಸ ವರುಷ ತರಲಿ ನಿಮ್ಮೆಲ್ಲರ ಬಾಳಲ್ಲಿ ಹೊಸ ಹರುಷ
ಬರುವ ದಿನಗಳಲ್ಲಿ
ನಿಮ್ಮ ಬಾಳ ಹಾದಿಯಲ್ಲಿ
ದಿನ ರಾತ್ರಿಗಳ ಕ್ಷಣ ಕ್ಷಣದ
ಪರಿಚಯನಿಮಗಿರಲಿ …..
ಹೊಸ ಜನ ಹೊಸ ಜಾಗಾ
ಹೊಸ ವಿಷಯಗಳ ಪರಿಚಯದಲ್ಲಿ
ಸದಾ ಹೆಚ್ಚರದಿಂದಿರಲಿ ನಿಮ್ಮ ಮನ!!
ಒಂದಲ್ಲ ಎರಡುಬಾರಿ ನಿನ್ನ ಮನದ ಮಾತಕೇಳಿ….!!
ಪ್ರಿತೀಯಮಾತಾಡಿ ಹೊನ್ನು ಹೆಣ್ಣು ಮಣ್ಣಿನ ಮೋಹದ ಜನರ ಮೋಸವ ಅರಿಯದೆ ಅವರ ನಂಬಿ ನಡೆದರೆ …. ಅಳಿದುಹೋಗುವುದು ನಿನ್ನಲ್ಲಿ ಇರುವ ವಿಶ್ವಾಸವೆಂಬ ಗುಣ !!
ನಿನ್ನ ಶ್ರಮದ ಫಲ!!
ನಿನ್ನ ಆತ್ಮದ ಬಲ!!
ನಿನ್ನ ಪ್ರೀತಿಯ ಹೃದಯದ ಪರಿಮಳ !!
ನಿನ್ನ ವಿಶ್ವಾಸದ ಛಲ!!
ಅಳಿಸುಹೋಗದಿರಲಿ …..
ಮೈ ಮರೆತು ಬಾಳದೆ ….
ಕಲಿತ ಬಾಳಿನ ಪಾಠವ ಮರೆಯದೆ….
ನಂಬಿ ಮೋಸಹೋಗದೆ ….!!
ನಿನಗಾಗಿ ನೀ ಬಾಳು …..!!
ನಿನ್ನ ನಗುವಿಗೆ ನೀನೇ ಕಾರಣ…!!
ನಿನ್ನ ಈ ಹೊಸವರುಷದ ದಾರಿಯಲ್ಲಿ ಸೊಗಸಾದ ಹೂಬನ ….ಅದರಲ್ಲಿ ಸತ್ಯ ಧರ್ಮ ರೀತಿ ನೀತಿಯ ಬೇರನ್ನ ನೆಟ್ಟು ….!!
ಸಿಂಪಡಿಸು ಪ್ರೀತಿಎಂಬ ನೀರನ್ನ …..!!
ಬೆಳೆದು ಮರವಾಗಿ ಕೊಡಲಿ ನೆಮ್ಮದಿಯ ನೆಲೆಯನ್ನ !!
(ಬರವಣಿಗೆ )
ಇವಾ ಲೇಖಾ
ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ 🙏🏻
ivaalekha7717@gmail.com
ವಾಟ್ಸ್ ಆಪ್ No: 9741329365