ಎಲ್ಲೆಲ್ಲೂ ಭಾಷಣ.
ನೆಲ ಜಲ ರಕ್ಷಣಾ
ಹರಿದಿದೆ ಕೋಡಿ
ಜಲ ಮೇಲ್ಮಹಡಿಗಳಲಿ
ಮಿಡಿದಿವೆ ಕಂದವ್ವಗಳು
ಹನಿ ಹನಿ ನೀರಿಗಾಗಿ
ಹರದಾರಿ ಸವೆಸಿವೆ
ಬಿಸಿಲೆನ್ನದೆ ಬೆವರೆನ್ನದೆ
ಸೋಲುತ್ತಿವೆ ಹೆಗಲುಗಳು
ಎತ್ತಿ ಹೊತ್ತುಮೆರೆಯುತ್ತಿವೆ
ಐಷಾರಾಮಿ ತೊಟ್ಟಿ
ಮೋಜಿನ ಮಳೆ ಆಟಗಳು
ನೆತ್ತಿಗೆ ಅಕ್ಷರವಿಲ್ಲ
ಹೊತ್ತಿನ ಪರಿವೆಯಿಲ್ಲ
ಬಗಲಲೊಂದು
ತಲೆ ಮೇಲೊಂದು
ಹೊತ್ತು ಸಾಗುತ್ತಿವೆ
ಕಲ್ಲೆನ್ನದೆ ಮುಳ್ಳೆನ್ನದೆ
ರಾಜಕೀಯ ದೊಂಬರಾಟ
ಹುಸಿ ಭರವಸೆ
ಹೋರಾಟ ಚಳುವಳಿ
ತಪ್ಪಲಿಲ್ಲ ಬವಣೆ
ನಿತ್ಯದ ಪರದಾಟ
ಸಾಗಿದೆ ಸೆಣಸಾಟ
ಎಲ್ಲೆಲ್ಲೂ ಭಾಷಣ
ನೆಲ ಜಲರಕ್ಷಣೆ
————————
ಸುನಿತಾ ಮೂರಶಿಳ್ಳಿ
ಧಾರವಾಡ.