UK Suddi
The news is by your side.

ಮತದಾರರ ಪಟ್ಟಿ ಪರಿಷ್ಕರಣೆ ಅವದಿ ಜನೇವರಿ 12 ರವರೆಗೆ ವಿಸ್ತರಣೆ.

ಧಾರವಾಡ:ಮತದಾರರ ಪಟ್ಟಿಗಳ ಸಂಕ್ಷೀಪ್ತ ಪರಿಷ್ಕರಣೆ ಕಾರ್ಯಕ್ರಮದ ಅರ್ಹತಾ ದಿನಾಂಕ 01-01-2018 ರಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ತಿದ್ದುಪಡಿಗಳಿಗಾಗಿ ಅಥವಾ ಬಿಟ್ಟು ಬಿಡತಕ್ಕ ವಿವರಗಳಿಗೆ ನಮೂನೆ 6,7, 8 ಮತ್ತು 8ಎ ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಭಾರತ ಚುನಾವಣಾ ಆಯೋಗವು ದಿನಾಂಕ: 12-01-2018 ರವರೆಗೆ ಅವಧಿ ವಿಸ್ತರಿಸಿದೆ. 

ಆದ್ದರಿಂದ ಅರ್ಹ ವ್ಯಕ್ತಿಗಳು ಇದರ ಸದುಪಯೋಗ ಪಡೆದುಕೊಂಡು ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಧಾರವಾಡದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Comments