UK Suddi
The news is by your side.

ಜನೇವರಿ 28 ಪೋಲಿಯೋ ಲಸಿಕಾ ಭಾನುವಾರ.


ಧಾರವಾಡ: ದೇಶಾದ್ಯಂತ ಜನೇವರಿ 28 ರಂದು 5 ವರ್ಷದೊಳಗಿನ ಪ್ರತಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವಿದ್ದು, ಇದು ಈ ವರ್ಷದ ಮೊದಲ ಸುತ್ತಿನದಾಗಿದೆ. ಜಿಲ್ಲೆಯಲ್ಲಿ ಬರುವ ಜನೇವರಿ 28ರ ಭಾನುವಾರವನ್ನು ಪೋಲಿಯೋ ಲಸಿಕಾ ಭಾನುವಾರವೆಂದು ಪರಿಗಣಿಸಿ ಪ್ರತಿ ಮಗುವಿಗೆ ಪಲ್ಸ ಪೋಲಿಯೋ ಹನಿ ಹಾಕುವಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೋಮ್ಮನಹಳ್ಳಿ ಅವರು ಹೇಳಿದರು.

ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲೆಯ 5 ವರ್ಷದೊಳಗಿನ 2,47,789 ಮಕ್ಕಳ ಗುರಿ ಹೊಂದಲಾಗಿದೆ. ಒಟ್ಟು 889 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರಯಾಣಿಕರ ಸ್ಥಳಗಳಲ್ಲಿ ಸಿಗುವ ಮಕ್ಕಳಿಗೆ ಲಸಿಕೆ ಹಾಕಲು 192 ತಂಡ ಮತ್ತು 52 ಸಂಚಾರಿ ತಂಡಗಳನ್ನು ರೂಪಿಸಲಾಗಿದೆ.
ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 3820 ಸಿಬ್ಬಂದಿ ತೊಡಗಿಕೊಳ್ಳಲಿದ್ದು, 216 ಜನ ಅಧಿಕಾರಿಗಳು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪೊಲಿಯೋ ಲಸಿಕಾ ಭಾನುವಾರ ಯಶಸ್ವಿಗಾಗಿ ಸಂಚಾರಕ್ಕಾಗಿ 165 ವಾಹನಗಳನ್ನು ಬಳಸಲಾಗುತ್ತಿದ್ದು, ಜಿಲ್ಲೆಯ ಒಟ್ಟು 4,24,305 ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇದೇ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಗಿರಿಧರ ಕುಕನೂರ,ಡಾ.ಪುಷ್ಪಾ.ಎಚ್.ಆರ್, ಡಾ.ವಿ.ಡಿ.ಕರ್ಪೂರಮಠ, ಡಾ.ಸಿದ್ದಲಿಂಗಯ್ಯ.ಎಚ್, ಡಾ.ಪ್ರಭು ಬಿರಾದಾರ, ಲಯನ್ಸ್ ಜ್ಞಾನೇಶ ನಾಥೂ, ಲಯನ್ಸ್ ಗಾಯತ್ರಿ ನಾಥೂ, ಡಾಎಸ್.ಬಿ.ನಿಂಬಣ್ಣವರ, ಡಾ.ಯಶವಂತ.ಎಂ, ಎಸ್.ಕೆ.ಮಾನಕರ, ಡಾ.ಸುಜಾತಾ ಹಸವಿಮಠ, ಎಸ್.ಎಲ್.ಅಂಬಲಿ, ಕಿಮ್ಸನ ಡಾ.ರಾಮಲಿಂಗಪ್ಪ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಲಯನ್ಸ್ ಮತ್ತು ರೊಟರಿ ಕ್ಲಬ್ ಪ್ರತಿನಿಧಿಗಳು ಹಾಗೂ ವಿವಿಧ  ಸಂಘ, ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.

Comments