UK Suddi
The news is by your side.

ಹತ್ತಿ ಉರಿಯುತಿದೆ -ಕಳಸಾ ಬಂಡೂರಿ ಮತ್ತು ಮಲಪ್ರಭಾ ಜೋಡಣೆಯ ಹೋರಾಟ

 ಮಹಾದಾಯಿ ಕಳಸಾ ಬಂಡೂರಿ ಮತ್ತು ಮಲಪ್ರಭಾ ಜೋಡಣೆಯ ಹೋರಾಟವು ಕಳೆದ ನಾಲ್ಕು ದಶಕಗಳಿಂದ ನಡದೇ ಇದೆ.

1980 ಜೂನ್ 21ಕರ್ನಾಟಕವು ಕಂಡ ರಕ್ತಸಿಕ್ತ ರೈತ ಕ್ರಾಂತಿ ನರಗುಂದ ಬಂಡಾಯ . ಮಲಪ್ರಭಾ ಕಾಲುವೆಯಿಂದ ನೀರಾವರಿ ಯೋಜನೆಯ ಫಲಾನುಭಾವಗಳಿಂದ ಕಾಂಗ್ರೆಸ್ ಸರಕಾರ ಒತ್ತಾಯ ಪೂರ್ವಕ ಅಭಿವೃದ್ಧಿ ಕರವನ್ನು  ಆಕರ ಮಾಡ ಹತ್ತಿತು . ನೀರು ಬರದೆ ಕರ ತುಂಬಲು ರೈತರು ನಿರಾಕರಿಸಿ  ಧರಣಿ ಮಾಡಿದರು .ನರಗುಂದ ನವಲಗುಂದ ಸವದತ್ತಿ ಬೈಲಹೊಂಗಲ ರಾಮದುರ್ಗ  ರೋಣ ಬಾದಾಮಿ ಮುಂತಾದ ತಾಲೂಕಿನ ಮಲಪ್ರಭಾ ಎಡ ಮತ್ತು ಬಲ ದಂಡೆ ಕಾಲುವೆಯ ನೀರಿನ ಫ ಲಾನುಭಾವಿ ರೈತರ ಮೇಲೆ ಬರ ಪರಿಸ್ತಿತಿಯಲ್ಲಿ ಹೆಚ್ಚಿನ ಕರ   ಗುಂಡುರಾವ  ಸರಕಾರ ಹೇರಿತು .ಇದನ್ನು ವಿರೋಧಿಸಿ ಮಲಪ್ರಭಾ ಕಾಲುವೆಯ ಭಾಗದ ರೈತರು  ಸರಕಾರದ ವಿರುದ್ಧ ಧಂಗೆ ಎದ್ದರು . ಇಬ್ಬರು  ರೈತರು ಪೊಲೀಸರ ಗುಂಡಿನ ದಾಳಿಯಲ್ಲಿ ಮ್ರತಪಟ್ಟರು  ಮತ್ತು   ಇಬ್ಬರು ಪೋಲಿಸ್ ಅಧಿಕಾರಿಗಳು ರೈತರ ಆಕ್ರೋಶಕ್ಕೆ ಬಲಿಯಾದರು.ಇದನ್ನು ನರಗುಂದ ರೈತ ಬಂಡಾಯವೆಂದೆ  ಕರೆಯಲಾಗುತ್ತದೆ .
ಆ ರೈತ ಕ್ರಾಂತಿಯ ಸೂಕ್ಷ್ಮತೆಯನ್ನು ಅರಿತ ಗುಂಡುರಾವ ಅವರು ಅಂದಿನ ವಿರೋಧಪಕ್ಷ ನಾಯಕರಾದ ಮತ್ತು ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿಯಾದ ಶ್ರೀ ಎಸ ಆರ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರೈತರ ನೀರಿನ ಸಮಸ್ಯೆಯನ್ನು   ಅರಿತು  ಅದಕ್ಕೆ ಪರಿಹಾರ ಸೂಚಿಸುವ ವರದಿಗಾಗಿ ಒಂದು ಕಮೀಟಿ ಮಾಡಿದರು.

ಈ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ ನುರಿತ ಅನುಭವಿ ರಾಜಕಾರಣಿ ಬೊಮ್ಮಾಯಿ ಅವರು ಸಮಗ್ರ ಅಧ್ಯಯನ  ನಡೆಸಿ ತಮ್ಮ ತಂಡದ ಸದಸ್ಯರೊಂದಿಗೆ    ಪ್ರತ್ಯಕ್ಷವಾಗಿ ಗೋವಾ ಮತ್ತು ಕರ್ನಾಟಕ ಮಹಾರಾಷ್ಟ್ರ ರಾಜ್ಯ ಪ್ರವಾಸ ಮಾಡಿ,ಮಹಾದಾಯಿ ನದಿಯ ೪೫ ಟಿ ಎಂ ಸಿ ನೀರನ್ನು ಮಲಪ್ರಭಾ ನದಿಗೆ ಜೋಡಿಸುವ ಅತ್ಯಂತ   ಐತಿಹಾಸಿಕ ವರದಿಯನ್ನು ಕೊಟ್ಟರು. ಆದರೆ ಮುಂದೆ ಬಂದ ಚುನಾವಣೆಯಲ್ಲಿ ಕಾಂಗ್ರೆಸ ಸರಕಾರ ಪಥನಗೊಂಡಿತು.

ಬೊಮ್ಮಾಯಿಯವರ ವರದಿ ಅನುಷ್ಠಾನಗೊಳ್ಳಲೆ ಇಲ್ಲಾ .

ಮುಂದೆ 1988 – 1989 ರಲ್ಲಿ ಜನತಾ ಪರಿವಾರದಲ್ಲಿ ಬೊಮ್ಮಾಯಿಯವರು ಮುಖ್ಯ ಮಂತ್ರಿ ಆಗುವ ಯೋಗ ಬಂದು ಒದಗಿತು. ಈ ಸುವರ್ಣ ಅವಕಾಶವನ್ನು ಬಳಸಿಕೊಂಡ ಮುತ್ಸದ್ಧಿ ಬೊಮ್ಮಾಯಿಯವರು  ಗೋವಾ ಸರಾರದ ಅಂದಿನ ಮುಖ್ಯ ಮಂತ್ರಿ  ಶ್ರೀ ಪ್ರತಾಪಸಿಂಹ  ರಾಣೆ ಅವರನ್ನು ಸಮಪರ್ಕಿಸಿ ಎರಡು ರಾಜ್ಯದ ಉಭಯ ಮಾತುಕತೆಗಳಿಂದ ಮಹಾದಾಯಿ ನದಿಯ ನೀರಿನ ಹಂಚಿಕೆಯ ಬಗ್ಗೆ ಸುಧೀರ್ಘ   ಚರ್ಚೆ ನಡೆಸಿ ಮಹಾದಾಯಿ ನದಿಯ 45 ಟಿ ಎಂ ಸಿ ನೀರನ್ನು ಮಲಪ್ರಭಾ ನದಿಗೆ ಬಿಡುವುದು ಮತ್ತು ಕಳಸಾ ನದಿಗೆ ಕಟ್ಟಲಾದ ಆಣೆಕಟ್ಟಿಗೆ ವಿದ್ಯುತ್ ಉತ್ಪಾದನೆಗೆ ಎರಡು ಸರಕಾರ ಸಹಕರಿಸಬೇಕು ಮತ್ತು  ವಿದ್ಯುತ್ತನ್ನು ಗೋವಾ ಸರಕಾರವೂ ಬಳಿಸಬಹುದು ಎಂದು ಒಪ್ಪಂದ ಉಭಯ ರಾಜ್ಯಗಳ ಒಪ್ಪಂದವನ್ನು ಮಾಡಿಕೊಂಡಿತು . ಆದರೆ ಅದೇ ದುರ್ದೈವ ಕರ್ನಾಟಕವನ್ನು ಮತ್ತೆ ಕಾಡಿತು .       ಬೊಮ್ಮಾಯಿಯವರ ಸರಕಾರ ಪತನಗೊಂಡಿತು.ಅನರಿಕ್ಷಿತ ಸರಕಾರದ ಪತನದ ನಂತರ ಮುಂದೆ ಬಂಡ ಗೋವಾ ಸರಕಾರ ಈ ಮಹಾದಾಯಿ ಯೋಜನೆಯನ್ನು ವಿರೋಧಿಸುತ್ತ ಬಂತು . ಗೋವಾ ಸರಕಾರವು ಪರಿಸರ ಹಾನಿ ಮತ್ತು ಜಲ ಚರ ಪ್ರಾಣಿ ಮತ್ತು ಸಸ್ಯಗಳಿಗೆ ಈ ಯೋಜನೆಯಿಂದಾ ಹಾನಿ ಆಗುವದೆಂಬ ಕುಂಟು ನೆಪ ಒಡ್ಡಿ ಮಹಾದಾಯಿ ಯೋಜನೆಯನ್ನು ಮುಂದುಡುತ್ತಲೇ ಬಂದರು.
ಕಳಸಾ ಬಂಡೂರಿ ಜೋಡಣೆಯ  ಮರು ಅಧ್ಯಯನ ಮತ್ತು ಪರಿಶೀಲನೆ ಅತ್ಯಗತ್ಯ .

—————————————————————————–

ಭೃಷ್ಟ ವ್ಯವಸ್ಥೆ ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಸ್ವಾರ್ಥ ತುಂಬಿದ ನಾಯಕರ ಕಚ್ಚಾಟದ ಮಧ್ಯೆ ಕಳಸಾ ಬಂಡೂರಿ ಹೋರಾಟಕ್ಕೆ ಹಿನ್ನೆಡೆಯಾಗಿದೆ .

45 ಟಿ ಎಂ ಸಿ ನೀರಿನ ಹಕ್ಕಿಗೆ ಪಾತ್ರರಾಗಬೇಕಾದ ಕರ್ನಾಟಕವು ಕೇವಲ 7 .56 ಟಿ ಎಂ ಸಿ ನೀರಿಗೆ ಭಿಕ್ಷೆ ಬೇಡುವುದು ನಾಚಿಕೆಗೇಡಿತನದ ವಿಷಯವಾಗಿದೆ.

1 ) ಹಲ್ತರಾ ಡ್ಯಾಮ್೦ , ಕಳಸಾ  ಡ್ಯಾಮ್೦, ಕೊತನಿ ಡ್ಯಾಮ್೦ , ಮತ್ತು  ಸುರಲಾ  ಹಾಗೂ  ಕಳಸಾ  ನದಿಗಳ ಜೋಡಣೆಯ  ಈ ಯೋಜನೆಯ ಸಮಗ್ರ ಮರು ಪರಿಶೀಲನೆ ಮಾಡಿ ಈ ಪ್ರದೇಶದ ಜನರಿಗೆ ಮರು ವಸತಿ ಕಲ್ಪಿಸಿದಲ್ಲಿ  ಯೋಜನೆ ಅರ್ಥಪೂರ್ಣವಾಗುತ್ತದೆ.

2 ) ಈ ಕೂಡಲೇ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜಲ ಸಂಪನ್ಮೂಲ ಕಾರ್ಯದರ್ಶಿ ಮತ್ತು ಮಂತ್ರಿಗಳನ್ನು

ಕರೆದು ಮಾತು ಕತೆ ನಡೆಸುವದು ಅತ್ಯವಶ್ಯವಾಗಿದೆ.

3 ) ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ವಿಳ೦ಬಗೊಳಿಸಿದ ಪರ್ಯಾವರಣ ವಿಭಾಗದ ಪರವಾನಿಗೆ ಅತ್ಯಗತ್ಯವಾಗಿದೆ.

 ರಾಷ್ಟ್ರಿಯ ಸಂಪತ್ತು ನದಿಗಳನ್ನು ನಿಸರ್ಗ ಹಿತ ಕಾಪಡಿಕೊಂಡು ಯಾವುದೆ ಹಾನಿ ಉಂಟು ಮಾಡದೆ ಕೈಗೊಳ್ಳುವ ಉದ್ದೇಶಿತ ಯೋಜನೆಗಳನ್ನು  ಕೂಡಲೆ

 ಪುರಸ್ಕರಿಸಬೇಕು .

4 ) ಕಾನೂನು ತಜ್ಞರು ,ನೀರಾವರಿ ತಜ್ಞರು ಸಾಮಾಜಿಕ ಕಾರ್ಯಕರ್ತರು,ರೈತ ಮುಖಂಡರು ,ಬುಡಕಟ್ಟು ಜನ ,ಒಟ್ಟಿಗೆ ಕುಳಿತು

ಸರಕಾರದಉದ್ದೇಶಿತ ಕಳಸಾ  ಡ್ಯಾಮ್೦ ನಿರಾಶ್ರಿತರಿಗೆ ಮರುವಸತಿ ಕಲ್ಪಿಸುವಲ್ಲಿ ಮುಂದಾಗಬೇಕು .

5 ) 1989 ರಿಂದಾ 2015 ವರೆಗಿನ ಮಹಾದಾಯಿ ಕಳಸಾ ಬಂಡೂರಿ ಮತ್ತು ಮಲಪ್ರಭಾ ಜೋಡಣೆಯ  ಬಗ್ಗೆ ಸರಕಾರಗಳು ಕೈಗೊಂಡ ಕ್ರಮಗಳು ಮತ್ತು ಯೋಜನೆಯ ಆರ್ಥಿಕ ಖರ್ಚು ವೆಚ್ಚದ ಬಗ್ಗೆ ಸಧ್ಯದ ಸರಕಾರ ಶ್ವೇತ  ಪತ್ರ ಹೊರಡಿಸಬೇಕು .

6 ) ಲಂಚಗುಳಿತನವಿಲ್ಲದ ಪಾರದರ್ಶಿಕ ಯೋಜನೆಯಾಗಬೇಕು.ಕಾಮಗಾರಿಯನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಸಬೇಕು.

ಕಳೆದ ಮೂರು ವರುಷಗಳಿಂದ ಮರಗುಂದ ನವಲಗುಂದ ನಗರಗಳಲ್ಲಿ ಅಹ್ಫ್ ರಾತ್ರಿ ಉಪಸವಾಸ ಸತ್ಯಾಗ್ರಹವನ್ನು ಕೈಕೊಂಡ ರೈತರ ಸಿಟ್ಟು  ಕೋಪ ಆಕ್ರೋಶಗಳು
ಸ್ಪೋಟಗೊಂಡರೆ ಅದು ಕರ್ನಾಟಕ ಸರಕಾರ ಮತ್ತು ಭಾರತ ಸರಕಾರಕ್ಕೆ ಕಪ್ಪು ಚುಕ್ಕೆ.
ರೈತರ ಹಿತಾಸಕ್ತಿ ಕಡೆಗಣಿಸಿ ನ್ಯಾಯಾಲಯದಲ್ಲಿ ನೆನೆಗುದಿಗೆ ಬಿದ್ದಿರುವ ಅಂತರಾಜ್ಯ ನದಿ ನೀರಿನ ಅನೇಕ ಟ್ರಿಬ್ಯುನಲ್ ಮತ್ತು ತಂಟೆಗಳನ್ನು ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕು .
ಉತ್ತರ ಕರ್ನಾಟಕದ ರೈತರ ಒಡಲಿಗೆ ದಶಕದಿಂದ ಬೆಂಕಿ ಹತ್ತಿ ಉರಿಯುವ   ಕಳಸಾ ಬಂಡೂರಿ ನಾಲಾ ಯೋಜನೆ ಈ ಕೂಡಲೇ ಅನುಷ್ಠಾನ ಗೊಳಿಸದಿದ್ದರೆ
1980 ರ ರೈತ ಬಂಡಾಯ ಮರುಕಳಿಸಿದರೆ ಆಶ್ಚರ್ಯ ಪಡಬೇಕಿಲ್ಲ .ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸೌಹಾರ್ಧ ಸ೦ಬ೦ಧ ವ್ರದ್ಧಿಸಲಿ . ಕಳಸಾ ಬಂಡೂರಿ ನಾಲಾ ಯೋಜನೆ ಸಮರ್ಪಕವಾಗಿ   ಅನುಷ್ಠಾನಗೊಳ್ಳಲಿ .
———————————————————
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

Comments