UK Suddi
The news is by your side.

ಪಿಎಫ್ಐ, ಕೆಎಫಡಿ ಸಂಘಟನೆಗಳನ್ನು ನಿಷೇದಗೋಳಿಸುವಂತೆ ಆಗ್ರಹಿಸಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ.


ಬಾಗಲಕೋಟ:ಜಿಲ್ಲೆಯ ಜಮಖಂಡಿ ತಾಲೂಕಿನ ಭಾರತಿಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಇಂದು ಕಳೆದ 03.01.2018 ರಂದು ಮಂಗಳೂರಿನಲ್ಲಿ ಭಾರತಿಯ ಜನತಾ ಪಾರ್ಟಿ ಕಾರ್ಯಕರ್ತನಾಗಿದ್ದ,ಕುಮಾರ ದೀಪಕ ರಾವ್ ಕ್ರೂರ ಹತ್ಯಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ದೀಪಕ ರಾವ್ ಅವರ ಬರ್ಬರ ಹತ್ಯೆಯಲ್ಲಿ ಭಾಗಿಯಾಗಿರುವ ಪಿ ಎಫ್ ಐ ಹಾಗೂ ಕೆ ಎಫ್ ಡಿ ಅಂತಹ ಸಂಘಟನೆಗಳನ್ನು ನಿಷೇಧಗೊಳಿಸುವಂತೆ ಹಾಗೂ ದೀಪಕ್ ರಾವ್ ಹಾಗು ಹಿಂದೂ ಕಾರ್ಯಕರ್ತರ ಎಲ್ಲಾ ಕೊಲೆಗಳ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (NIA) ಗೆ ವಹಿಸಬೇಕುಂದು ಆಗ್ರಹಿಸಿ ಜಮಖಂಡಿಯಲ್ಲಿ ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಒಂದು ವೇಳೆ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ವಹಿಸದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುವದಾಗಿ ಮನವಿ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಭಾರತಿಯ ಜನತಾ ಪಾರ್ಟಿ ಮುಖಂಡರು,ಯುವ ಮೋರ್ಚಾ ಸದಸ್ಯರು ಉಪಸ್ಥಿತರಿದ್ದರು.

Comments