UK Suddi
The news is by your side.

ಭಾರತೀಯ ವ್ಯವಸ್ಥೆಗೆ –  ಒಂದು ಪರ್ಯಾಯ ಶಕ್ತಿ ಮತ್ತು ವ್ಯವಸ್ಥೆ. ಸಾಧ್ಯವೇ ?

ಭಾರತಕ್ಕೆ ಸ್ವತಂತ್ರ ಬಂದು ಏಳು ದಶಕ ಕಳೆದರೂ ನಮ್ಮಲ್ಲಿ ಕಿತ್ತು ತಿನ್ನುವ ಬಡತನ ,ಹಸಿವು ,ಶೋಷಣೆ ,ದಾರಿದ್ರ್ಯ,, ಅನಕ್ಷರತೆ ಅಸಮಾನತೆ ಭಯಂಕರ ರೂಪದಲ್ಲಿ 
ಕಾಡುತ್ತಿವೆ. ಬ್ರಿಟಿಷರು ಕಾಂಗ್ರೆಸಿಗರಿಗೆ   ಅಧಿಕಾರ ಹಸ್ತಾಂತರಿಸಿದರು .ದೇಶವನ್ನು ಉತ್ತಮ ರೀತಿಯಲ್ಲಿ ಒಯ್ಯ ಬಹುದೆನ್ನುವ ಭರವಸೆ ಹುಸಿಯಾಯಿತು. ಅಂಬೇಡ್ಕರ ಜೆ ಪಿ ಲೋಹಿಯಾ ಮತ್ತು ಎಂ ಏನ್ ರಾಯ್ ಸಿದ್ಧಾಂತಗಳು ಆರಂಭದಲ್ಲಿ ಗಟ್ಟಿಗೊಂಡು ಹೋರಾಟದ ನಂತರದ ದಿನಗಳಲ್ಲಿ  ತಮ್ಮ ನೆಲೆ ಸೆಲೆಗಳನ್ನು ಕಳೆದುಕೊಂಡವು. 

ಮಾರ್ಕ್ಸವಾದವು ಈ ದೇಶಕ್ಕೆ ಪರ್ಯಾಯವಾಗ ಬಹುದೆನ್ನುವ ಪ್ರಬಲ ಆಸೆ ಮುಗ್ಗರಿಸಿತು. ಸಿ ಪಿ ಐ ,ಸಿಪಿಎಂ ಫಾರ್ವಾರ್ಡ್ ಬ್ಲಾಕ್ ಮುಂತಾದ ಎಡಪಂಥೀಯ ಪಕ್ಷಗಳಲ್ಲಿ ಅನೇಕ ಸೈದ್ಧಾಂತಿಕ ಭಿನ್ನ ಮತಗಳಿಂದ ಅವುಗಳು ಒಗ್ಗೂಡಲು ಸಾಧ್ಯವಾಗುತ್ತಿಲ್ಲ.

ಶ್ಯಾಮ   ಪ್ರಸಾದ ಮುಖರ್ಜಿ ಅವರಿಂದ ಸ್ಥಾಪಿತಗೊಂಡ ಭಾರತೀಯ ಜನ ಸಂಘ ,ಆರ್ ಎಸ ಎಸ ಜೊತೆಗೂಡಿ ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ಮೂಲತಃ ಹಿಂದುತ್ವದ ಆಧಾರದ ಮೇಲೆ ಭಾರತದ ಆಡಳಿತದ ಚುಕ್ಕಾಣಿಯನ್ನು  ಹಿಡಿಯಲು ಹರ ಸಾಹಸ ಮಾಡಿದವು.

ನೆಹರು ಅವರಿಂದ ಹಿಡಿದು ಇಂದಿರಾ ಗಾಂಧಿ ಅವರ ವರೆಗೆ ಮೂವತ್ತು ವರ್ಷಗಳ ಕಾಲ ಭಾರತೀಯ ರಾಜಕಾರಣಕ್ಕೆ ಕಾಂಗ್ರಸಿಗೆ ಪರ್ಯಾಯವೆನ್ನುವುದು  ಒಂದು ಭ್ರಮೆ   ಎನಿಸಿ   ಬಿಟ್ಟಿತ್ತು . ಇಂದಿರಾ ಗಾಂಧಿ ವಿರುದ್ಧ ರಾಜನಾರಾಯಣ ಅವರು ಅಲಹಾಬಾದ ಹೈ ಕೋರ್ಟ್ ಗೆ ಹೋಗಿ ಇಂದಿರಾ ಗಾಂಧಿ ಅವರ ಚುನಾವಣೆಯಲ್ಲಿ ಆಕ್ರಮ ಎಸಗಿದ್ದನ್ನು ಸಾಬೀತು ಪಡಿಸಿ ಅವರನ್ನು ಅನರ್ಹಗೊಳಿಸಿದ್ದಕ್ಕೆ  ಶ್ರೀಮತಿ ಇಂದಿರಾ ಗಾಂಧಿ ದೇಶದಲ್ಲಿ ಅತ್ಯಂತ ಭಯಾನಕ ಕರಾಳ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು.

ಆದರೆ 1975  ರಲ್ಲಿನ ಇಪ್ಪೊತ್ತೊಂದು ತಿಂಗಳಿನ ತುರ್ತು ಪರಿಸ್ಥಿತಿ ಹೇರಿಕೆಯಿಂದಾಗಿ ಭಾರತದಲ್ಲಿ ಸಮಾನ ಮನಸ್ಕರ ರಾಜಕೀಯ ಪಕ್ಷಗಳು ಜಯ ಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ಜನತಾ ಪಾರ್ಟಿ ಯನ್ನು ಸ್ಥಾಪಿಸಿದರು ,ಭಾರತೀಯ ಜನ ಸಂಘ ಸಮಾಜವಾದಿ ಕೆಲ ಘಟಕಗಳು ಲೋಕದಳ ಕಾಂಗ್ರೆಸ್ ಓ ಮುಂತಾದ ಪಕ್ಷಗಳು ಕೂಡಿ ಒಂದು ಪರ್ಯಾಯ ಪಕ್ಷವನ್ನು ಸ್ಥಾಪಿಸಿದರು . ಆಗ ಭಾರತದ ಉದ್ದಗಲಕ್ಕೂ ಇನ್ನೊಂದು ಸ್ವತಂತ್ರ ಹೋರಾಟದ ಮಾದರಿಯನ್ನು 

ನಾವು ಕಂಡೆವು. ಜಯಪ್ರಕಾಶ್ ನಾರಾಯಣ ಅವರು ದೇಶಕ್ಕೆ ಎರಡನೆಯಬಾರಿಗೆ  ಸ್ವತಂತ್ರ    ತಂದು ಕೊಟ್ಟರು.

ಮುಂದೆ ಮೊರಾರ್ಜಿ ದೇಸಾಯಿಯವರು ಅತ್ಯಂತ ಉತ್ತಮ ಆಡಳಿತವನ್ನು ದೇಶಕ್ಕೆ  ನೀಡಿದರು. ಆದರೆ ಒಳ ಜಗಳ ಕಚ್ಚಾಟದಿಂದ ಮೊರಾರ್ಜಿ ಭಾಯಿ ದೇಸಾಯಿ ಅವರು ರಾಜೀನಾಮೆ ನೀಡಿದರು .ಚರಣ ಸಿಂಗ ಅವರು ಮುಂದೆ ಪ್ರಧಾನಿಯಾದರೂ ಪಕ್ಷ ಭಾರತದ ಆಡಳಿತ ಚುಕ್ಕಾಣೆ ಹಿಡಿಯಲು ಸಾಧ್ಯವಾಗಲಿಲ್ಲ.

ಇದೆ ಸಂದರ್ಭದಲ್ಲಿ  ಭಾರತೀಯ ಜನತಾ ಪಕ್ಷವು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವ ಹಾಗು ಅಧ್ಯಕ್ಷತೆಯಲ್ಲಿ ಸ್ಥಾಪಿತಗೊಂಡಿತು.

ಕರ್ನಾಟಕವು ಮತ್ತೆ 1983  ರಲ್ಲಿ ಜನತಾ ಪಕ್ಷ ಮತ್ತು ಕ್ರಾಂತಿರಂಗ ಇವರ ಮೈತ್ರಯಿಂದ ಮೊದಲ ಕಾಂಗ್ರೆಸೇತರ ಸರಕಾರವನ್ನು ಶ್ರೀ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ನೀಡಲಾಯಿತು. 
ನಂತರ ದಿನಗಳಲ್ಲಿ ಕೆಲ ಮಟ್ಟಿಗೆ ಜನತಾ ಪರಿವಾರ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಆಡಳಿತ ನಡೆಸಿದರು ಸಂಪೂರ್ಣ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ .

ವಿ ಪಿ ಸಿಂಗ್ . ಚಂದ್ರಶೇಖರ್ , ದೇವೇಗೌಡರು ಐ ಕೆ   ಗುಜ್ರಾಲ್ ಜನತಾ ಪರಿವಾರದಿಂದ ಪ್ರಧಾನಿಯಾದರು.

ಕರ್ನಾಟಕದ ಮಟ್ಟಿಗೆ ಎಸ ಆರ್ ಬೊಮ್ಮಾಯಿ , ಜೆ ಎಚ್ ಪಟೇಲ್ ಜನತಾ ಪರಿವಾರದಿಂದ ಮುಖ್ಯ ಮಂತ್ರಿಯಾದರು.

ಕೇಂದ್ರದಲ್ಲಿ ಅಟಲ್ ಬಿಹಾರಿ   ವಾಜಪೇಯಿ 1998 ರಿಂದ    2004 ರ  ವರೆಗೆ  ರಲ್ಲಿ ಪ್ರಧಾನ  ಮಂತ್ರಿಯಾದರು .

ಆಮ್ ಆದ್ಮಿ ಪಾರ್ಟಿ ಒಂದು ಹಂತದಲ್ಲಿ ಸಂಪೂರ್ಣ ಭಾರತಕ್ಕೆ ಆಶಾ ಭಾವನೆ ಹುಟ್ಟಿಸಿ ಅಷ್ಟೇ ಬೇಗ ತನ್ನ ನೆಲೆಯನ್ನು ಕಳೆದುಕೊಂಡಿತು.
ನಂತರ ಕರ್ನಾಟಕದಲ್ಲಿ  ಕುಮಾರ ಸ್ವಾಮಿ ಹಾಗು  ಯೆಡಿಯೂರಪ್ಪ ಸಮ್ಮಿಶ್ರ ಸರಕಾರವು ಕರ್ನಾಟಕದಲ್ಲಿ ಕಾಂಗ್ರೆಸೇತರ ಸರಕಾರವೆನಿಸಿತು.ಕುಮಾರ ಸ್ವಾಮಿ ಯೆಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ ಎನ್ನುವ ಸಹಾನುಭೂತಿಯಿಂದ ಮೊದಲ ಬಾರಿಗೆ ಬಿಜೆಪಿ ಪೂರ್ಣ ಪ್ರಮಾಣದ ಆಡಳಿತವನ್ನು ನೀಡಿತು.

ಲಂಚ ಭ್ರಷ್ಟತೆ ಮಿತಿ ಮೀರಿ ಮುಖ್ಯ ಮಂತ್ರಿ ಯೆಡಿಯೂರಪ್ಪನವರು ಸೇರಿ ಸುಮಾರು ಎಂಟು ಜನ ಮಂತ್ರಿ ಶಾಸಕರು ಜೈಲು ಕಂಡು ಬಂದರು.

ಮುಂದೆ ಮತ್ತೆ ಕಾಂಗ್ರೆಸು ಆಡಳಿತ  ಕಾಣುವಂತಾಯಿತು .

ಭ್ರಷ್ಟತೆಯಲ್ಲಿ ಈಗ ಕಾಂಗ್ರೆಸು ಮತ್ತು ಬಿಜೆಪಿ ಎರಡು ಒಂದೇ ನಾಣ್ಯದ ಎರಡು ಮುಖಗಳು.ಚುನಾವಣೆ ಈಗ ಅವುಗಳಿಗೆ ಕೇವಲ ನೆಪ ಮಾತ್ರ .

ಅಧಿಕಾರ ಹಸ್ತಾಂತರ ಪತ್ರ ಬದಲಾವಣೆ ಇದ್ದಂತೆ ಇವರ ಆಕ್ರಮಗಳನ್ನು ಅವರು ಅವರ ಆಕ್ರಮಗಳನ್ನು ಇವರು ಮುಚ್ಚಿ ಹಾಕುವ ಕಾಂಗ್ರೆಸು ಮತ್ತು ಬಿಜೆಪಿ ಪಕ್ಷಗಳು ತಮ್ಮ ತಮ್ಮ ಸ್ವಾರ್ಥವನ್ನು ಪ್ರದರ್ಶಿಸಿದ್ದಾರೆ. ಒಂದು ಅರ್ಥದಲ್ಲಿ   ಕಾಂಗ್ರೆಸು ಮತ್ತು ಬಿಜೆಪಿ ಏ ಟೀಮ್ ಮತ್ತು ಬಿ ಟೀಮ್ ಅಷ್ಟೇ 

ರೈತ ಸಂಘಟನೆಗಳು ,ಹಸಿರು ಸೇನೆ    ಪ್ರಗತಿ ಪರ ಚಿಂತಕರು ಸ್ವರಾಜ್ ಇಂಡಿಯಾ ಪಕ್ಷದಂತಹ ಸಂಘಟನೆಗಳು  ಗಟ್ಟಿಯಾಗಿ ಸಬಲಗೊಳಿಸಿದರೆ ಸಧ್ಯಕ್ಕೆ ರಾಜ್ಯ ಮಟ್ಟದಲ್ಲಿ ಒಂದು ಶಕ್ತಿಯುತ ಪರ್ಯಾಯ ವ್ಯವಸ್ಥೆ ಶಕ್ತಿಯಾಗುವದರಲ್ಲಿ ಸಂದೇಶವಿಲ್ಲ. 

WORLD SUFFERS NOT BECAUSE OF VIOLENCE OF  BAD  PEOPLE BUT BECAUSE SILENCE OF GOOD PEOPLE   

ಎಂದೆನ್ನುವಂತೆ ಆಕ್ರಮ ಅನ್ಯಾಯಗಳು ದುಷ್ಟರ ಹಿಂಸೆಯಿಂದಲ್ಲ ಆದರೆ ಶಿಷ್ಟರ ಮೌನದಿಂದ .

ಕಾರಣ ಇದು ಪರ್ಯಾಯ ಪಕ್ಷ ಸಂಘಟನೆಗೆ ಯೋಗ್ಯ ಕಾಲ, ಭ್ರಷ್ಟರನ್ನು ಮನೆಗೆ ಕಳಿಸೋಣ  ಜಾತಿ ಮುಕ್ತ ಸಮಾಜ ನಿರ್ಮಿಸೋಣ ಮತ್ತೆ ಅಂಬೇಡ್ಕರ   ಲೋಹಿಯಾ ಜೆ ಪಿ ಅವರ ಆದರ್ಶಗಳನ್ನು ನಾಗರೀಕ ಸಮಾಜದಲ್ಲಿ ಸ್ಥಾಪಿಸೋಣ 

———————————————————-

ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ  

Comments