UK Suddi
The news is by your side.

ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾನೂನಿನ ಆದೇಶದಲ್ಲಿ ಏನಿದೆ ??


ಚುನಾವಣಾ ಸಂದರ್ಭದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎಂಬ ಬರವಸೆಯಿಂದಾ ಇಂದಿನ ಕೇಂದ್ರ ಸರಕಾರ ರೈತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದರು.

ಸ್ವಾತಂತ್ರ ನಂತರದ 68 ವರ್ಷಗಳ ಕಾಲದಿಂದ ರೈತರ ಆತ್ಮ ಹತ್ಯೆ ನಡೆದಿದ್ದು .ದುರ್ದೈವದ ಸಂಗತಿಯಾಗಿದೆ .

ಭೂ ಸ್ವಾಧೀನ (2013 ) ಕಾನೂನಿನ ಮಧ್ಯೆ ಬದಲಾವಣೆ ಮಾಡುವ ಸಲುವಾಗಿ ಕೇಂದ್ರ ಸರಕಾರವು ತರಾತುರಿಯಲ್ಲಿ ತಂದ ಹೊಸ ಭೂ ಸ್ವಾಧೀನ ಕಾಯ್ದೆಯು ರೈತ ರ ಆತ್ಮ ಹತ್ಯೆಗೆ ಕಾರಣ ಎಂಬುದನ್ನು ಅಲ್ಲಗಳೆಯಲಾಗುವದಿಲ್ಲ .

ಒಂದೊಮ್ಮೆ ಭೂ ಖರೀದಿ ಸಂಪಾದನೆಯ ವಿರೋಧವಾಗಿ ರೈತರು ನಡೆಸಿದ ಚಳುವಳಿ ಸಿಂಗೂರು ಮಾನ ಮುಂತಾದ ಕಡೆಗಳಲ್ಲಿ ಹಿಂಸಾತ್ಮಕವಾಗಿ ಹೋರಾಟ ಪರಿವರ್ತನೆಗೊಂಡ ಕಾರಣ ಹಿಂದಿನ ಸರಕಾರವು ಭೂ ಸುಧಾರಣ ಕಾಯದೆ ಮತ್ತು ಭೂ ಸ್ವಾಧೀನ ಕಾಯ್ದೆ (2013 )ಯನ್ನು ತಂದಿತು .ಆದರೆ ಪ್ರಸಕ್ತ ಕೇಂದ್ರ ಸರಕಾರವು ತಂದ ಭೂ ಸ್ವಾಧೀನ ಕಾನೂನಿ೦ದ ಮತ್ತೊಮ್ಮೆ ಆಂದೋಲನ ಹಿ೦ಸೆಯ ರೂಪ ತಾಳಬಹುದು .ಎಂಬ ಭೀತಿ ನಮ್ಮನ್ನು ಕಾಡುತ್ತಿದೆ.
ಕೇಂದ್ರದಲ್ಲಿ ಹೊಸ ಸರಕಾರ ಆಡಳಿತ ಬಂದ ನಂತರ ರೈತರ ಹಿತ ದ್ರಷ್ಟಿಯಲ್ಲಿ ಭೂ ಕಾಯದೆಯಾಗುವದು ಎಂಬ ನಂಬಿಕೆ ಭರವಸೆಯಿತ್ತು .,ಆದರೆ ಈ ಸರಕಾರವು ಹೊಸ ಭೂ ಸ್ವಾಧೀನ ಕಾನೂನನ್ನು ಜಾರಿಗೆಗೊಳಿಸಿ ರೈತ ವಿರೋಧಿ ಹೆಜ್ಜೆಯನ್ನು ಇಟ್ಟಿರುವುದು ದುರ್ದೈವದ ಸಂಗತಿಯಾಗಿದೆ .

ಈ ಸರಕಾರವು ಕೃಷಿ ಭೂಮಿಯನ್ನು ವಿಕಾಸ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ನುಂಗ ಬೇಕೆನ್ನುವ ಧೋರಣೆಯನ್ನು ಹೊಂದಿದೆ . ಕೃಷಿ ಅವಲಂಬಿತ ರೈತರನ್ನು ಮೋಸ ಮಾಡಿದೆ ಎಂಬ ಸ್ಪಷ್ಟ ಚಿತ್ರಣ ಕಾಣುತ್ತಿದೆ . ಜನ ತಂತ್ರವೆಂದರೆ ಜನರಿಂದ ಜನರಿಗಾಗಿ ಜನರೇ ಆಳುವ ವ್ಯವಸ್ಥೆಯಾಗಿದೆ .ಆದ್ದರಿಂದ ಜನರನ್ನು ಮೋಸಗೊಳಿಸಿ ಅಧಿಕಾರ ಚಲಾಯಿಸಲು ಸಾಧ್ಯವಾಗುವದಿಲ್ಲ .

ಭೂ ಸ್ವಾಧೀನ ಕಾಯ್ದೆ (2013 ) ಕಾಯ್ದೆಯಲ್ಲಿ ಗ್ರಾಮೀಣ ಭೂಪ್ರದೆಶವನ್ನು ವಶಪಡಿಸಿಕೊಳ್ಳುವ ಮುನ್ನ ಪ್ರತಿಶತ 80 % ರೈತರ ಅನುಮತಿ ಅವಶ್ಯವಿರಬೇಕು ಎನ್ನುವ ನಿಯಮದ ಅವಕಾಶವಿತ್ತು . ಆದರೆ ಈ ಸರಕಾರವು ಈ ಅವಕಾಶವನ್ನು ಕಿತ್ತು ಹಾಕಿದೆ . ಅಂದರೆ ಸರಕಾರ ತನ್ನ ಮರ್ಜಿಯಂತೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಹುದು .ಮತ್ತು ಸರಕಾರಕ್ಕೆ ಅನುಕೂಲವಾಗುವಂತೆ ತಮಗೆ ಬೇಕಾದ ಔಧ್ಯೊಗಿಕ ಕ್ಷೇತ್ರಕ್ಕೆ ಮತ್ತು ಉದ್ಧಿಮೆ

ದಾರರಿಗೆ ಕೊಡಬಹುದು .ಇಂತಹ ಒಂದು ಕಾನೂನು ಜನತಂತ್ರವಿರೋಧಿಯಾಗಿದೆ .
ಮೂಲ ಕಾನೂನಿನಲ್ಲಿ ಸಾಮಾಜಿಕ ಪರಿಣಾಮದ ಮೌಲ್ಯಗಳನ್ನು ಅಂತರಗತವಾಗಿತ್ತುಕೊಂಡು ಯಾವುದೇ ಯೋಜನೆ ಕಾರ್ಯಗತಗೊಳಿಸಬೇಕಿದ್ದರೆ,ಅದು ಲೋಕ ತಾಂತ್ರಿಕ ಪದ್ಧತಿಯಂತೆ ನಡೆಯಬೇಕು. ಗ್ರಾಮೀಣ ಪ್ರದೇಶದ ಜನರ ಅಹವಾಲನ್ನು ಸ್ವೀಕರಿಸಿ ರೈತರ ಇಚ್ಚೆ ಇದ್ದರೆ ಮಾತ್ರ ಭೂಮಿ ಹಸ್ತಾಂತರಕ್ಕೆ ಅನುಮಾಡಿಕೊಡುವ ಅವಕಾಶ ಹಿಂದಿನ ಭೂ ಸ್ವಾಧೀನ ಕಾಯ್ದೆ (2013 ) ಕಾಯ್ದೆಯಲ್ಲಿತ್ತು .ಆದರೆ ಈ ಸರಕಾರವು ಹೊಸ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದು .ಮೊದಲಿದ್ದ ರೈತರ ಹಕ್ಕು ಅವಕಾಶವನ್ನು ಕಿತ್ತು ಹಾಕಿದೆ . ಈ ಹೊಸ ಭೂ ಸ್ವಾಧೀನ ಕಾಯ್ದೆಯ ಆದೇಶಮತ್ತು ಅದನ್ನು ಅನುಷ್ಟಾನಗೊಳಿಸುವ ನಿರ್ಣಯವು ಸಂಪೂರ್ಣ ಜನತಂತ್ರ ವಿರೋಧಿಯಾಗಿದ್ದಲ್ಲದೆ ರೈತರಿಗೆ ಬಾರಿ ಅನ್ಯಾಯ ಮಾಡುವ ರೀತಿಯಲ್ಲಿದೆ .
ಯೋಜನೆಗಾಗಿ ನಿರ್ದಿಷ್ಟ ಪಡಿಸದ ಭೂಮಿಯು ಐದು ವರ್ಷದಲ್ಲಿ ಯೋಜನೆಗಾಗಿ ಬಳಸಿದಿದ್ದಲ್ಲಿ,ಅಂತಹ ಭೂಮಿಯನ್ನು ಮತ್ತೆ ರೈತರಿಗೆ ಮರಳಿ ನೀಡಬೇಕು ಇಂತಹ ಅವಕಾಶವು ಈ ಹಿಂದಿನ ಭೂ ಸ್ವಾಧೀನ ಕಾನೂನಿನಲ್ಲಿ ಇತ್ತು .ಇಂತಹ ಒಳ್ಳೆಯ ನಿರ್ದೇಶನವನ್ನು ಈ ಸರಕಾರವು ಸಮಗ್ರವಾಗಿ ತೆಗೆದು ಹಾಕಲಾಗಿದೆ.

ಆದರೆ ಈಗ ಉದ್ಯೋಗಪತಿಗಳು ಐದು ವರ್ಷದಲ್ಲಿ ಯೋಜನೆಯನ್ನುಕೈಗೊಳ್ಳದೆ ಮತ್ತು ಮೂಲ ಮಾಲಿಕರಿಗೆ ಜಮೀನು ಹಿಂದೆ ಕೊಡದೆ ಸರಕಾರದ ಸಹಾಯದಿಂದಾ ಭೂಮಿಯನ್ನು ತಮ್ಮ ಖಬ್ಜಾ ಹತೋಟಿಯಲ್ಲಿ ಇಟ್ಟುಕೊಂಡಿದ್ದಾರೆ .

ಯೋಜನೆಯಲ್ಲಿ ದೇಶದ ಯಾವುದೇ ಹಿತಾಸಕ್ತಿ ಇದ್ದಿದ್ದರೆ ಭೂ ಸ್ವಾಧೀನ ಕಾನೂನಿನ ಆದೇಶದಲ್ಲಿ ವಿಶೇಷ ಸವಲತ್ತು ನೀಡಬಹುದಿತ್ತು ಆದರೆ

ಈಗಿನ ಕೇಂದ್ರ ಸರಕಾರದ ಜಾರಿಗೆ ತಂದ ಹೊಸ ಭೂ ಸ್ವಾಧೀನ ಕಾಯಿದೆಯು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಖಾಸಗಿ ಆಸ್ಪತ್ರೆ ಶಿಕ್ಷಣ ಸಂಸ್ಥೆ ಮುಂತಾದ ಯೋಜನೆಗಳಿಗೆ ರೈತರ ಜಮೀನನ್ನು ನೀಡುವ ಉದ್ಧೆಶವನ್ನು ಹೊಂದಿದೆ ,ಜನರಿಂದಾ ಒತ್ತಾಯಪೂರ್ವಕವಾಗಿ ಭೂಮಿಯನ್ನು ಪಡೆದು ಪಕ್ಷದ ಕಾರ್ಯಕರ್ತರಿಗೆ ನಿಡುವ ಈ ಆದೇಶ ಯಾವ ಪುರುಶಾರ್ತಕೆ ಅಂತ ಸರಕಾರವೇ ಹೇಳಬೇಕು .
ದೇಶಕ್ಕೆ ಸಾಕಾಗುವಷ್ಟು ಆಹಾರ ಧಾನ್ಯ ಬೆಳೆಯುವದು ಉತ್ಪಾದಿಸುವದು ಜನರ ಹಿತ ದ್ರಷ್ಟಿಯಿ೦ದ ಅವಶ್ಯವಾಗಿದೆ .ಫಲವತ್ತಾದ ಭೂಮಿಯನ್ನು ಸರಕಾರವು

ಭೂ ಸ್ವಾಧೀನ ಮಾಡಬಾರದು ಎಂಬ ಅ೦ಶವು ಈ ಹಿಂದಿನ ಕಾಯ್ದೆಯಲ್ಲಿತ್ತು . ಫಲವತ್ತಾದ ಭೂಮಿ 2- ಅಥವಾ 3ಬೆಳೆಗಳನ್ನು ಬೆಳೆಯುತ್ತಿದ್ದರೆ ಅಂತಹ ಭೂಮಿಯನ್ನು ಉಧ್ಯೋಗಪತಿಗಳಿಗೆ ಕೊಡಬಾರದು ಎಂಬ ವಿಚಾರವು ಹಿಂದಿನ ಆದೇಶದಲ್ಲಿತ್ತು .ಇಂತಹ ಒಳ್ಳೆಯ ಆದೇಶವೂ ಸಹಿತ ಇಂದಿನ ಸರಕಾರ ತೆಗೆದು

ಹಾಕಿದ್ದು ಕಂಡು ಬಂದಿದೆ .ಇದರಿಂದ ಅತ್ಯಂತ ಫಲವತ್ತಾದ ಭೂಮಿಯನ್ನುಉಧ್ಯೋಗಪತಿಗಳು ಪಡೆಯಬಹುದು .ಇಂತಹ ಅನೇಕ ಕಷ್ಟದಾಯಕ ವಿಚಾರಗಳನ್ನು ಹೊಸ ಭೂ ಸ್ವಾಧೀನ ಕಾನೂನಿನಲ್ಲಿ ಪ್ರಕಟಿಸಲಾಗಿದೆ .
ಕೇವಲ ಬಲಾಡ್ಯ ಜನರಿಗಾಗಿ ಶ್ರೀಮಂತರಿಗಾಗಿ ಒಳ್ಳೆಯ ದಿನಗಳು ಬರುತ್ತಿದ್ದು ರೈತರ ಆತ್ಮಾಹುತಿ ಸಂಖ್ಯೆ ಹೆಚ್ಹಾಗುವದರಲ್ಲಿ ಸಂಶಯವಿಲ್ಲ .ಇಂದಿನ ಸರಕಾರವು ಈ ಹಿಂದಿನ ಭೂ ಸ್ವಾಧೀನ ಕಾಯಿದೆಯನ್ನು ತೆಗೆದು ಹಾಕಿ ರೈತರಿಗೆ ತೀವ್ರ ಅನ್ಯಾಯ ಮಾಡುತಿದ್ದಾರೆ ದೇಶವನ್ನು ಆಳಿದ ಇಂಗ್ಲಿಶರಿಗೂ ಇವರಿಗೂ ಇರುವ ವ್ಯತ್ಯಾಸವೇನು ?
ಲೋಕ ಸಭೆ ಮತ್ತು ವಿಧಾನಸಭೆಗಿಂತಾ ಗ್ರಾಮಸಭೆಗಳು ಹೆಚ್ಚು ಹಾಗು ಶ್ರೇಷ್ಟ ಜನತಂತ್ರ ವ್ಯವಸ್ಥೆಯಾಗಿದೆ .ಏಕೆಂದರೆ ಶಾಸಕರನ್ನು ಸಂಸದರನ್ನು ಗ್ರಾಮಸಭೆಗಳು ಚುನಾಯಿಸಿ ಕಳಿಸುತ್ತಿವೆ.ಆದುದರಿಂದ ಲೋಕ ಸಭೆ ಮತ್ತು ವಿಧಾನಸಭೆಗಳ ತಾಯಿಯೇ ಗ್ರಾಮಸಭೆ ಎಂದು ಪರಿಗಣಿಸಲಾಗಿದೆ .

ಗ್ರಾಮಸಭೆಯು ಬಲಾಡ್ಯ ,ಸ್ವತಂತ್ರ ಹಾಗೂ ಸಾರ್ವಭೌಮ ಜನತಂತ್ರ ವ್ಯವಸ್ಥೆಯಾಗಿದೆ.

18 ವರ್ಷ ತುಂಬಿದ ಪ್ರತಿಯೊಬ್ಬನು ಗ್ರಾಮಸಭೆಯ ಅಥವಾ ವಾರ್ಡನ ಸದಸ್ಯನಾಗುತ್ತಾನೆ. ಒಮ್ಮೆ ಸದಸ್ಯನಾದರೆ ಆತನ ಜೀವಿತ ಕಾಲದವರೆಗೆ ಅಂದ್ರೆ
ಮರಣದವರೆಗೆ ಸದಸ್ಯನಾಗುತ್ತಾನೆ.ಇದು ಅವಸರದ ಆಯ್ಕೆಯಲ್ಲ . ಗ್ರಾಮಸಭೆ ಪ್ರತಿ ಐದು ವರ್ಷಕೊಮ್ಮೆ ಲೋಕ ಸಭೆ ಮತ್ತು ವಿಧಾನಸಭೆಗಳನ್ನು ಆಯ್ಕೆ ಮಾಡುವದು ,ಆದರೆ ಎಂದಿಗೂ ಗ್ರಾಮಸಭೆ ಬದಲಾಗುವದಿಲ್ಲ .ಆದುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮೀಣ ಪ್ರದೇಶದಲ್ಲಿ ನೆಲ ಜಲ ವನಸಂಪತ್ತಿನ ಸ೦ರಕ್ಷಣೆಯ ಅನುಮತಿ ದೊರೆಯುವದಿಲ್ಲವೋ ?ಅಲ್ಲಿಯ ವರೆಗೆ ಈ ಸರಕಾರಗಳು ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ .
ಸರಕಾರದ ಯಾವುದೇ ಯೋಜನೆಗೂ ಗ್ರಾಮಸಭೆಯ ಎಲ್ಲಾ ಸದಸ್ಯರ ಮಾನ್ಯತೆ ಮತ್ತು ಅನುಮತಿ ಪಡೆಯುವದು ಅಗತ್ಯ ಮತ್ತು ಅನಿವಾರ್ಯವಾಗಿವೆ . ಅಲ್ಲಿಯವರೆಗೆ ಸರಕಾರದ ಯಾವುದೇ ಯೋಜನೆಗಳು ಸ್ವೀಕಾರವಾಗಲಾರವು. ಇಂತಹ ಗ್ರಾಮಸಭೆಯ ಅಧಿಕಾರವನ್ನು ಕೇಂದ್ರ ಸರಕಾರ ತೆಗೆದು ಹಾಕಿ ಗ್ರಾಮಸಭೆಯ ಕತ್ತು  ಹಿಸುಕಿದೆ .

1857 ರಿಂದ 1947 ರ ವರೆಗೆ ತೊಂಬತ್ತು ವರ್ಷ ಲಕ್ಷಾ೦ತರ ಜನರು ದೇಶಕ್ಕಾಗಿ ಬಲಿದಾನಗೊಂಡಿದ್ದಾರೆ.ಯೋಧರು ನಗು ನಗುತಾ ಗಲ್ಲು ಕುಣಿಕೆಗೆ ಕತ್ತು
ಕೊಟ್ಟರು .ಇವರೆಲ್ಲರ ಸ್ವಪ್ನವು ಇಂಗ್ಲಿಷರನ್ನು ಭಾರತದಿಂದಾ ಓಡಿಸಿಜನತಂತ್ರ ಸ್ಥಾಪಿಸಬೇಕೆಂದಿತ್ತು. ಇಂಗ್ಲಿಷರು ದೇಶವ ಬಿಟ್ಟು ಹೋದರು ,ಆದರೆ ಇಲ್ಲಿ ಲೋಕತಂತ್ರದ ಪ್ರಜಾಪ್ರಭುತ್ವ ಬರಲೇ ಇಲ್ಲ . ಏಕೆ ಈ ಬಲಿದಾನ ವ್ಯರ್ಥವಾಯಿತೆ ??ಎನ್ನುವದು ಬಗೆಹರಿಯದ ಪ್ರಶ್ನೆಯಾಗಿದೆ .

ಆದುದರಿಂದ ಭಾರತಿಯರಾದ ನಾವು ಈಗ ಗಂಭಿರವಾಗಿ ವಿಚಾರಿಸುವುದು ಅವಶ್ಯಕವಾಗಿದೆ ,ಮತ್ತೊಮ್ಮೆ ನಾವು ಬಲಿದಾನಕ್ಕೆ ಸಿದ್ಧರಾಗಬೇಕು ಕೇಂದ್ರ ಸರಕಾರದ ಜೊತೆಗಿನ ಹೋರಾಟದಲ್ಲಿ ಪ್ರಾಣ ಬಲಿದಾನಗೊಂಡರೂ ಚಿಂತೆಯಿಲ್ಲಾ ಆದರೆ ದೇಶಕ್ಕಾಗಿ ಬಲಿದಾನ ಮಾಡಿದವರ ತ್ಯಾಗ ಜೀವನ ವ್ಯರ್ಥವಾಗಬಾರದು .ವ್ಯರ್ಥವಾಗಲೂ ನಾವು ಬಿಡುವದಿಲ್ಲ -ಜೈ ಹಿಂದ


– ಮೂಲ ಮರಾಠಿಯಲ್ಲಿ – ಶ್ರೀ ಅಣ್ಣಾ ಹಜಾರೆ .ಸಾಮಾಜಿಕ ಹೋರಾಟಗಾರರು .

ಕನ್ನಡಕ್ಕೆ ಅನುವಾದ.-ಡಾ ಶಶಿಕಾಂತ .ಪಟ್ಟಣ -ಪೂನಾ

Comments