ಬೆಂಗಳೂರಿನ ವಿಜಯನಗರದಲ್ಲಿ ಇಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನ ಭಾಷಣ
ಬೆಂಗಳೂರು: ಬಿಜೆಪಿ ಪರಿವರ್ತನಾ ರ್ಯಾಲಿ ಅಂಗವಾಗಿ ಭಾನುವಾರ ವಿಜಯನಗರ ಬಾಲಗಂಗಾಧರನಾಥ ಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ 10 ವಿಧಾನಸಭಾ ಕ್ಷೇತ್ರ ಮಟ್ಟದ ಸಮಾವೇಶದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನ ಭಾಷಣ ಮಾಡಲಿದ್ದಾರೆ.
ವಿಜಯನಗರ, ಗೋವಿಂದ ರಾಜನಗರ ವ್ಯಾಪ್ತಿಯಲ್ಲಿ ಧ್ವಜ, ಬಂಟಿಂಗ್ಸ್, ್ಲೆಕ್ಸ್ ಕಟ್ಟಿ ಸಿಂಗರಿಸಿರುವ ಪಕ್ಷದ ಕಾರ್ಯಕರ್ತರು, ಕಾರ್ಯಕ್ರಮದ ಪ್ರಭಾವವನ್ನು ಜನರಿಗೆ ಮುಟ್ಟಿಸಲು ವಿಶೇಷ ಪ್ರಯತ್ನ ನಡೆಸಿದ್ದಾರೆ. ಒಕ್ಕಲಿಗರೇ ಹೆಚ್ಚಿರುವ ಈ ಭಾಗದಲ್ಲಿ ಸಮಾವೇಶ ನಡೆಸುವ ಮೂಲಕ ನಾಥ ಪಂಥದ ಯೋಗಿ ಆದಿತ್ಯ ನಾಥ್ರಿಂದ ವಿಶೇಷ ಸಂದೇಶ ರವಾನಿಸುವುದು ಪಕ್ಷದ ಮುಖಂಡರ ಚಿಂತನೆಯಾಗಿದೆ.
ಬೆಳಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, 11.15ಕ್ಕೆ ಯೋಗಿ ಆದಿತ್ಯನಾಥ್ ವೇದಿಕೆಗೆ ಆಗಮಿಸಲಿದ್ದಾರೆ. ನಂತರ ಸಚಿವರಾದ ಅನಂತ ಕುಮಾರ್, ಸದಾನಂದ ಗೌಡ, ಬಿ.ಎಸ್. ಯಡಿಯೂರಪ್ಪ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.