UK Suddi
The news is by your side.

ಡೆತ್ ನೋಟ್ ಬರೆದಿಟ್ಟು ಹುಲ್ಲತ್ತಿ ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿ ಆತ್ಮಹತ್ಯೆ


ಹಾವೇರಿ: ಹುಲ್ಲತ್ತಿ ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿ ಡೆತ್‍ನೋಟ್ ಬರೆದಿಟ್ಟು ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದಿದೆ.


38 ವರ್ಷದ ಮಹಾಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದವರು. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶಾಖಾ ಮಠದ ಸ್ವಾಮೀಜಿಯೂ ಕೂಡಾ ಆಗಿದ್ದರು.

 

Comments