ಮೌನ ಮುರಿದಾಗ.
ಒಳಗೊಳಗೇ ನೋವು
ಅಳಕು ಆತಂಕದ ಮನೆ
ಹೊರಗೆ ಕೃತಕ ನಗೆ
ಎಲ್ಲವನ್ನೂತುಂಬಿಕೊಂಡಿರುವೆ
ಕನಸು ಕಮರಿಲ್ಲ
ಭಾವ ಮುದುರಿಲ್ಲ
ಬೆದರದಿರು ದುಗುಡು ದುಮ್ಮಾನ
ನೀನು ಏನು ಹೇಳಲಿಲ್ಲ
ನಾನು ಎಲ್ಲವನ್ನು ತಿಳಿದೆನು.
ಗಟ್ಟಿ ಮಾನವ ಮಾಡಿ
ಮುರಿದುಬಿಡು ಮೌನವ
ಕಾಡು ಚಿಗುರುತ್ತದೆ
ಹಾಡುತ್ತದೆ ಮನದ
ಮೂಲೆಯ ಕೋಗಿಲೆ .
ಅಚ್ಚ ಹಸುರಿನ ಮೇಲೆ
ನಿತ್ಯ ಉಸುರಿನ ಬದುಕು.
ನೀನು ಮೌನ ಮುರಿದಾಗ
ಬದುಕು ನಿನ್ನದಾಗುತ್ತದೆ
ನೆಮ್ಮದಿ ಗೂಡು ಕಟ್ಟುತ್ತದೆ.
—————————-
ಡಾ.ಶಶಿಕಾಂತ.ಪಟ್ಟಣ ಪುಣೆ