ರಾಜ್ಯ ಸರ್ಕಾರದಿಂದ ಲ್ಯಾಪ್ ಟಾಪ್ ಭಾಗ್ಯ.
ಬೆಂಗಳೂರು:ಕಳೆದ ನಾಲ್ಕನೇ ತಾರೀಖಿನಂದು ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಲ್ಯಾಪ್ ಟಾಪ್ ವಿತರಣಾ ಸಮಾರಂಭದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲ್ಯಾಪ್ಟಾಪ್ ವಿತರಿಸಿದರು.
ಇದು ಸಾಂಕೇತಿಕ ಉದ್ಘಾಟನಾ ಸಮಾರಂಭವಾಗಿದ್ದು, ರಾಜ್ಯಾದ್ಯಾಂತ ಶೀಘ್ರದಲ್ಲೇ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೈ ಸೇರಲಿದೆ.
ಈ ಯೋಜನೆಯಿಂದ ಶೋಷಿತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಾಜ್ಯ ಸರ್ಕಾರ ನೆರವಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಮತ್ತೊಂದು ಕೊಡುಗೆ ಇಂದಿನಿಂದ ಅನುಷ್ಠಾನಕ್ಕೆ ಬಂದಂತಾಗಿದೆ.
ಪರಿಶಿಷ್ಟರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್ ಸಿ ಪಿ-ಟಿ ಎಸ್ ಪಿ ಯೋಜನೆಯಲ್ಲಿ ಹಣ ಬಿಡುಗಡೆ ಮಾಡುವ ಕುರಿತು ಬಜೆಟ್ ನಲ್ಲಿ ಉಲ್ಲೇಖ ಸಹ ಮಾಡಿದ್ದರು ಅದರಂತೆ ಇದೀಗ ಯೋಜನೆ ಜಾರಿಗೆ ಬಂದಿದೆ.
ಈ ಉಡುಗೊರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಕಲ್ಪಿಸಲು ರಾಜ್ಯ ಕಾಂಗ್ರೆಸ್ಸ್ ಸರ್ಕಾರ 37ಕೋಟಿ ವೆಚ್ಚಮಾಡಲಿದೆ.
ಈ ಯೋಜನೆಯಲ್ಲಿ ರಾಜ್ಯದ ಸುಮಾರು 12,854 ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ದೊರೆಯಲಿದೆ.